ಉದಯ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ‘ಗಂಗೆ ಗೌರಿ’ 300 ಸಂಚಿಕೆಗಳನ್ನು ಪೂರೈಸಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿಂದ ಪ್ರಾರಂಭವಾಗಿದ್ದ ಈ ಧಾರಾವಾಹಿ ವೀಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿತ್ತು. ಅಕ್ಕ ತಂಗಿಯ ಕುರಿತ ಈ ಧಾರಾವಾಹಿಗೆ ಎಲ್ಲೆಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಧಾರವಾಹಿ 300 ಸಂಚಿಕೆಗಳನ್ನು ಪೂರೈಸಿದ್ದು, ಉದಯವಾಹಿನಿ ತನ್ನ ಅಧಿಕೃತ Instagram ಖಾತೆಯಲ್ಲಿ ಅಪ್ಲೋಡ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದೆ.
ಹಿರಿಯ ನಟ ಅಭಿಜಿತ್ ಸೇರಿದಂತೆ ಅಪೂರ್ವ ಭಾರದ್ವಾಜ್, ದರ್ಶ್ ಚಂದ್ರಪ್ಪ, ಹೇಮಾ ಬೆಳ್ಳೂರು, ದರ್ಶಿನಿ ಗೌಡ, ಲಕ್ಷ್ಮಿ ಸಿದ್ದಯ್ಯ, ವಿದ್ಯಾ ಶಾಸ್ತ್ರಿರೋಹಿತ್ ಶ್ರೀನಾಥ್, ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ವಿನೋದ್ ದೊಂಡಾಳೆ ನಿರ್ದೇಶಿಸಿದ್ದಾರೆ. ವೃದ್ಧಿ ಕ್ರಿಯೇಶನ್ ಬ್ಯಾನರ್ ನಲ್ಲಿ ವರ್ಧನ್ ಹರಿ ನಿರ್ಮಾಣ ಮಾಡಿದ್ದಾರೆ. ಪ್ರೇಕ್ಷಕರು ಪ್ರತಿದಿನ ರಾತ್ರಿ ಹತ್ತು ಗಂಟೆಗೆ ಈ ಧಾರಾವಾಹಿಯನ್ನು ಮಿಸ್ ಮಾಡದೆ ವೀಕ್ಷಣೆ ಮಾಡುತ್ತಿದ್ದು, ಒಳ್ಳೆಯ ರೇಟಿಂಗ್ ನಲ್ಲಿದೆ.