ಪಾಟ್ನಾ: ಪಾಟ್ನಾದ ಕೊಟ್ವಾಲಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಸ್ನೇಹಿತರೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮೊದಲು ಓರ್ವ ಅಪ್ರಾಪ್ತ ಬಾಲಕ ಇನ್ಸ್ಟಾಗ್ರಾಂ ನಲ್ಲಿ ಯುವತಿ ಜೊತೆ ಸ್ನೇಹ ಬೆಳೆಸಿದ್ದಾನೆ. ನಂತರ ಆಕೆಯ ಜೊತೆ ಸಲುಗೆಯಿಂದ ವರ್ತಿಸಿ ಹೋಟೆಲ್ ರೂಂ ಒಂದಕ್ಕೆ ಕರೆದುಕೊಂಡು ಹೋಗಿ ತನ್ನ ಸ್ನೇಹಿತರ ಜೊತೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ ನಾಲ್ವರು 8,10 ನೇ ತರಗತಿ ವಿದ್ಯಾರ್ಥಿಗಳು.
ಘಟನೆಗೆ ಸಂಬಂಧಿಸಿದಂತೆ ನಾಲ್ವರು ಹುಡುಗರನ್ನು ಬಂಧಿಸಲಾಗಿದೆ. ಕೊಟ್ವಾಲಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಸ್ನೇಹಿತರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಮಗೆ ಮಂಗಳವಾರ ರಾತ್ರಿ ಮಾಹಿತಿ ಸಿಕ್ಕಿತು. ಪೊಲೀಸರು ಸ್ಥಳಕ್ಕೆ ತಲುಪಿ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದರು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಕಾನೂನು ಮತ್ತು ಸುವ್ಯವಸ್ಥೆ-1 (ಪಾಟ್ನಾ) ಕೃಷ್ಣ ಮುರಾರಿ ಪ್ರಸಾದ್ ಹೇಳಿದರು.
TAGGED:ಅತ್ಯಾಚಾರ
