ನಟ ಗೋಲ್ಡನ್ ಸ್ಟಾರ್ ಗಣೇಶ್ ಬಾಲಿವುಡ್ ಗೆ ಕಾಲಿಡುತ್ತಿದ್ದಾರೆ. ಅವರ ಹೊಸ ಸಿನಿಮಾ ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.
ಶ್ರೀನಿವಾಸ್ ರಾಜು ನಿರ್ದೇಶನದ ಕನ್ನಡ ಚಿತ್ರದಲ್ಲಿ ಗಣೇಶ್ ನಟಿಸಿದ್ದು, ದೇವಿಕಾ ಭಟ್, ಮಾಳವಿಕಾ ಶರ್ಮಾ ಚಿತ್ರದ ನಾಯಕಿಯರು. ಈ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡದಿಂದ ತಯಾರಿ ನಡೆಸಲಾಗಿದೆ. ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದೊಂದು ಯೂನಿವರ್ಸಲ್ ಕಥೆಯಾಗಿದ್ದು, ಕನ್ನಡದ ಜೊತೆಗೆ ಹಿಂದಿಯಲ್ಲಿಯೂ ನೇರವಾಗಿ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಾರ್ತ್ ಇಂಡಿಯಾ ಪ್ರೇಕ್ಷಕರು ಕೂಡ ದಕ್ಷಿಣದ ಚಿತ್ರಗಳನ್ನು ನೋಡುತ್ತಿದ್ದಾರೆ. ಹೀಗಾಗಿ ಗಣೇಶ್ ಬಾಲಿವುಡ್ ಗೆ ಹೋಗುವುದಕ್ಕೆ ಈ ಸಿನಿಮಾ ಸೂಕ್ತವೆನಿಸಿದೆ ಎಂದು ನಿರ್ದೇಶಕ ಶ್ರೀನಿವಾಸ್ ರಾಜು ಹೇಳಿದ್ದಾರೆ.
