ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ನಟ ರಾಜವರ್ಧನ್ ಅವರ ಬಹು ನಿರೀಕ್ಷಿತ ‘ಗಜರಾಮ’ ಮುಂದಿನ ತಿಂಗಳು ಫೆಬ್ರವರಿ 7ರಂದು ತೆರೆ ಮೇಲೆ ಬರಲು ಸಿದ್ಧವಾಗಿದೆ. ಈ ಚಿತ್ರದ ಟ್ರೈಲರ್ ಅನ್ನು ಇದೆ ಜನವರಿ 27ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡುವುದರ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಸುನಿಲ್ ಕುಮಾರ್ ವಿಎ ನಿರ್ದೇಶನದ ಈ ಚಿತ್ರದಲ್ಲಿ ರಾಜವರ್ಧನ್ ಗೆ ಜೋಡಿಯಾಗಿ ತಪಸ್ವಿನಿ ಪೂಣಚ್ಚ ಅಭಿನಯಿಸಿದ್ದು, ಲೈಫ್ ಲೈನ್ ಫಿಲಂಸ್ ಬ್ಯಾನರ್ ನಲ್ಲಿ ನರಸಿಂಹಮೂರ್ತಿ ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ಮಲ್ಲಿಕಾರ್ಜುನ್ ಕಾಶಿ & ಕ್ಸೇವಿಯರ್ ಫೆರ್ನಾಂಡಿಸ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ, ಅರ್ಜುನ್ ರಾಜ್, ಡಿಫ್ರೆಂಟ್ ಡ್ಯಾನಿ, ಟೈಗರ್ ಶಿವು ಅವರ ಸಾಹಸ ನಿರ್ದೇಶನವಿದ್ದು, ಕೆ ಎಸ್ ಚಂದ್ರಶೇಖರ್ ಛಾಯಾಗ್ರಹಣ, ಹಾಗೂ ಧನಂಜಯ ಬಿ ನೃತ್ಯ ನಿರ್ದೇಶನವಿದೆ.