BIG NEWS: ಅಪ್ರಾಪ್ತ ಯುವತಿಯರಿಗೆ ಅಶ್ಲೀಲ ಮೆಸೇಜ್ ರವಾನೆ: ಆರೋಪಿ ಯುವಕರನ್ನು ಧ್ವಜ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿತ!

ಗದಗ: ಅಪ್ರಾಪ್ತ ಯುವತಿಯರಿಗೆ ಅಶೀಲ ಮೆಸೇಜ್ ಕಳುಹಿಸಿ ಪೀಡಿಸುತ್ತಿದ್ದ ಮೂವರು ಅಪ್ರಾಪ್ತ ಯುವವಕರನ್ನು ಹಿಡಿದು ಧ್ವಜ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗದಲ್ಲಿ ನಡೆದಿದೆ.

ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಯುವಕರು ಅಪ್ರಾಪ್ತ ಯುವತಿಯರಿಗೆ ಅಶ್ಲೀಲವಾಗಿ ಮೆಸೇಜ್ ಕಳಿಹಿಸಿ ಚುಡಾಯಿಸುತ್ತಿದ್ದರಂತೆ. ಇದರಿಂದ ಯುವತಿಯರ ಕುಟುಂಬದವರು, ಯುವಕರನ್ನು ಗ್ರಾಮ ಪಂಚಾಯಿತಿ ಧ್ವಜ ಕಂಬಕ್ಕೆ ಕಟ್ಟಿಹಾಕಿ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ದೊಣ್ಣೆ, ಚಪ್ಪಲಿಯಿಂದ ಹೊಡೆದಿದ್ದಾರೆ.

ಘಟನೆ ಬೆನ್ನಲ್ಲೇ ಹಲ್ಲೆಗೊಳಗಾದ ಯುವಕರ ಪೋಷಕರು ಸವರ್ಣಿಯರು, ದಲಿತ ಯುವಕರನ್ನು ಕಟ್ಟಿಹಾಕಿ ಹೊಡೆದಿದ್ದಾರೆ. ಬಿಡಿಸಲು ಹೋದರೆ ನಮಗೂ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read