ಗದಗ: ಬೆಂಬಲ ಬೆಲೆಗೆ ಆಗ್ರಹಿಸಿ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆ ಗದಗದಲ್ಲಿ ತೀವ್ರಗೊಂಡಿದೆ. ರೈತರೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಕುಮಾರ ಮಹಾರಾಜ ಶ್ರೀಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿ ರೈತರು ತಾವು ಬೆಳೆದಿರುವ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಕಳೆದ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಕುಮಾರ ಮಹಾರಾಜ ಶ್ರೀಗಳು ಕೂಡ ರೈತರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಐದು ದಿನಗಳಿಂದ ಸ್ವಾಮೀಜಿ ಕೂಡ ಅನ್ನ-ಆಹಾರ ತ್ಯಜಿಸಿ ಉಪವಾಸ ವಿರುವುದರಿಂದ ಸ್ವಾಮೀಜಿ ಅಸ್ವಸ್ಥರಾಗಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಸ್ವಾಮೀಜಿ ಅಸ್ವಸ್ಥರಾಗಿದ್ದು, ಆದಾಗ್ಯೂ ಸ್ವಾಮೀಜಿ ಹೋರಾಟ ಕೈಬಿಡಲು ಒಪ್ಪಿಲ್ಲ. ಮತ್ತೊಂದೆಡೆ ರೈತರು ಸ್ವಾಮೀಜಿಯವರ್ಗೆ ಏನಾದರೂ ಆದರೆ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
