ಇಸೈವಾಣಿ ಅವರ ‘ಐಯಾಮ್ ಸಾರಿ ಅಯ್ಯಪ್ಪ’ ಹಾಡಿನ ಸಾಹಿತ್ಯಕ್ಕೆ ಆಕ್ರೋಶ; ಕಾನೂನು ಕ್ರಮಕ್ಕೆ ಆಗ್ರಹಿಸಿದ ಭಕ್ತರು

ಇಸೈವಾಣಿಯವರ ಹಾಡು “ಐ ಆಮ್ ಸಾರಿ ಅಯ್ಯಪ್ಪ” ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆದಿದೆ, ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಕುರಿತು ಅಯ್ಯಪ್ಪ ಭಕ್ತರಿಂದ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

ʼದಿ ಕ್ಯಾಸ್ಟ್‌ಲೆಸ್ ಕಲೆಕ್ಟಿವ್‌ʼ ಅಭಿನಯಕ್ಕಾಗಿ ಖ್ಯಾತರಾಗಿರುವ ಚೆನ್ನೈನ ಪ್ರಮುಖ ಗಾಯಕಿ ಇಸೈವಾಣಿ ಇತ್ತೀಚೆಗೆ ತಮಿಳುನಾಡಿನಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಗಾನ ಎಂಬುದು ತಮಿಳು ಸಂಗೀತದ ಪ್ರಕಾರವಾಗಿದ್ದು, ಇದು ರಾಪ್ ತರಹದ ಲಯ ಮತ್ತು ಬೀಟ್‌ಗಳನ್ನು ಸಂಯೋಜಿಸುತ್ತದೆ.

ಇಸೈವಾಣಿಯವರ “ಐ ಆಮ್ ಸಾರಿ ಅಯ್ಯಪ್ಪ” ಹಾಡಿನ ಸಾಹಿತ್ಯವು ಇತ್ತೀಚೆಗೆ ವೈರಲ್ ಆಗಿದ್ದು ವಿವಾದವು ಭುಗಿಲೆದ್ದಿದೆ. ಇದು ಅಯ್ಯಪ್ಪನ ಭಕ್ತರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಈ ಹಾಡನ್ನು ವರ್ಷಗಳ ಹಿಂದೆ ಪ್ರದರ್ಶಿಸಲಾಗಿದ್ದರೂ, ಇತ್ತೀಚೆಗೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವ್ಯಾಪಕ ಗಮನ ಸೆಳೆದಿದೆ.  ..

“ಐ ಆಮ್ ಸಾರಿ ಅಯ್ಯಪ್ಪ” ಪ್ರದರ್ಶನ ಮಾಡುವಾಗ ಗಾನ ಗಾಯಕಿ ಇಸೈವಾಣಿ ಶಿಲುಬೆಯನ್ನು ಧರಿಸಿದ್ದು,ಇದು ಹಿಂದೂ ಧಾರ್ಮಿಕ ಭಾವನೆಗಳಿಗೆ ಅಗೌರವವಾಗಿದೆ ಎಂದು ಹೇಳಲಾಗಿದೆ. ಇದರಿಂದ ಹಿಂದೂ ಮುನ್ನಾನಿ ಸಂಘಟನೆಯ ಹಲವಾರು ಸದಸ್ಯರು ಹಾಗೂ ಅಯ್ಯಪ್ಪ ಭಕ್ತರು ಗಾಯಕರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read