ಆಲಿಯಾ ಮನೆಯಲ್ಲಿದ್ದಾಗ ಪಕ್ಕದ ಕಟ್ಟಡದಲ್ಲಿ ನಿಂತು ಫೋಟೋ ಕ್ಲಿಕ್; ಪೋಸ್ಟ್ ಹಂಚಿಕೊಂಡು ನಟಿ ಆಕ್ರೋಶ

ಸೆಲೆಬ್ರಿಟಿಗಳಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ. ಹೀಗಾಗಿ ಅವರನ್ನು ಮಾತನಾಡಿಸಲು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳುತ್ತಿರುತ್ತಾರೆ. ಆದರೆ ಇದು ಸಾರ್ವಜನಿಕ ಸ್ಥಳಗಳಲ್ಲಿ ಹೇಗೋ ನಡೆಯುತ್ತದೆ. ಆದರೆ ಸೆಲೆಬ್ರಿಟಿಗಳು ಮನೆಯಲ್ಲಿದ್ದಾಗಲೂ ಕದ್ದು ಮುಚ್ಚಿ ಫೋಟೋ ತೆಗೆದರೆ ಸಹಜವಾಗಿಯೇ ಆಕ್ರೋಶ ವ್ಯಕ್ತವಾಗುತ್ತದೆ.

ಇಂಥವುದೇ ಒಂದು ಘಟನೆ ನಟಿ ಅಲಿಯಾ ಭಟ್ ಅವರಿಗೂ ಆಗಿದ್ದು, ಇತ್ತೀಚೆಗೆ ಅವರು ತಮ್ಮ ಮನೆಯ ಒಳಗೆ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಯಾರೋ ತಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಭಾವನೆ ಅವರಿಗೆ ಮೂಡಿದ್ದು, ಹೊರ ಬಂದು ನೋಡಿದ ವೇಳೆ ಇಬ್ಬರು ವ್ಯಕ್ತಿಗಳು ಕ್ಯಾಮೆರಾ ಇಟ್ಟುಕೊಂಡು ಪಕ್ಕದ ಕಟ್ಟಡದಲ್ಲಿ ನಿಂತಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲ ಹೀಗೆ ಅವರುಗಳು ತೆಗೆದ ಫೋಟೋವನ್ನು ಮಾಧ್ಯಮ ಒಂದು ಪ್ರಕಟಿಸಿರುವುದು ಅಲಿಯಾ ಭಟ್ ಆಕ್ರೋಶ ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಅವರು, ಈ ರೀತಿ ಮಾಡುವುದು ನನ್ನ ಖಾಸಗಿತನಕ್ಕೆ ತಂದ ಧಕ್ಕೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಾನು ನನ್ನ ಮನೆಯಲ್ಲಿ ಸುರಕ್ಷಿತ ಭಾವನೆಯಿಂದ ಇರಲು ಸಾಧ್ಯವಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿರುವ ಆಲಿಯಾ ಭಟ್ ಈ ಪೋಸ್ಟ್ ಅನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಅಲಿಯಾ ಭಟ್ ಅವರ ಪೋಸ್ಟ್ ಗೆ ಇತರೆ ಸೆಲೆಬ್ರಿಟಿಗಳಿಂದಲೂ ಬೆಂಬಲ ವ್ಯಕ್ತವಾಗಿದ್ದು, ಅನುಷ್ಕಾ ಶರ್ಮಾ, ಜಾನ್ವಿ ಕಪೂರ್, ಕರಣ್ ಜೋಹರ್ ಮೊದಲಾದವರು ತಮಗೂ ಈ ರೀತಿ ಅನುಭವ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಹೋಟೆಲ್ ರೂಮ್ ಫೋಟೋ ಕೂಡ ವೈರಲ್ ಆಗಿದ್ದು, ಆಗ ಅನುಷ್ಕಾ ಶರ್ಮಾ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

Alia1

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read