ನವದೆಹಲಿ: ಇ- ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಕಂಪನಿ ಮಾರಾಟಗಾರರಿಗೆ ಶುಲ್ಕ ವಿನಾಯಿತಿ ನೀಡಿದೆ. ಫ್ಲಿಪ್ಕಾರ್ಟ್ ವೇದಿಕೆಯ ಮೂಲಕ ಒಂದು ಸಾವಿರ ರೂ.ಗಿಂತ ಕಡಿಮೆ ಬೆಲೆ ಹೊಂದಿರುವ ಎಲ್ಲಾ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಅರ್ಹ ಮಾರಾಟಗಾರರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಬೆಂಬಲ ನೀಡಲು ಮತ್ತು ಉತ್ಪನ್ನಗಳು ಗ್ರಾಹಕರಿಗೆ ದೊರೆಯುವಂತೆ ಮಾಡುವ ಉದ್ದೇಶದೊಂದಿಗೆ ಫ್ಲಿಪ್ಕಾರ್ಟ್ ನಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಮಾದರಿ ಫ್ಲಿಪ್ಕಾರ್ಟ್ ಸಮೂಹದ ಶಾಪ್ಸಿ ಗೆ ಕೂಡ ಅನ್ವಯವಾಗುತ್ತದೆ. ಇಲ್ಲಿ ಎಲ್ಲಾ ಉತ್ಪನ್ನಗಳಿಗೆ ದರ ಲೆಕ್ಕಿಸದೆ ಶುಲ್ಕ ವಿನಾಯಿತಿ ಇರುತ್ತದೆ.
ಎಂಎಸ್ಎಂಇಗಳಿಗೆ ಬೆಂಬಲ ನೀಡಲು ಮತ್ತು ಉತ್ಪನ್ನಗಳು ಗ್ರಾಹಕರಿಗೆ ದೊರೆಯುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಫ್ಲಿಪ್ಕಾರ್ಟ್ ಕಂಪನಿ ತಿಳಿಸಿದೆ.
