ಒಂದು ಹೊತ್ತಿನ ಊಟಕ್ಕಾಗಿ ಪರದಾಡಿದರೂ ಅದೆಷ್ಟೋ ತಂದೆ-ತಾಯಿಗಳು ತಮ್ಮ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಕೆಲಸಕ್ಕೆ ಸೇರಲೆಂದು ಏನೆಲ್ಲ ಕಷ್ಟಪಟ್ಟು ಓದಿಸುತ್ತಾರೆ. ಇಲ್ಲೋರ್ವ ಬಡ ಮಹಿಳೆ ಬೀದಿಬದಿ ಹಣ್ಣಿನ ವ್ಯಾಪಾರ ಮಾಡುತ್ತಲೇ ಪಕ್ಕದಲ್ಲಿಯೇ ತನ್ನ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೃದಯಸ್ಪರ್ಶಿಯಾಗಿದೆ.
ಬಡ ಮಹಿಳೆ ರಸ್ತೆಬದಿ ಹಣ್ಣಿನ ವ್ಯಾಪಾರ ಮಾಡುತ್ತ ತಳ್ಳುಗಾಡಿ ಪಕ್ಕದಲ್ಲಿಯೇ ಚಾಪೆ ಹಾಸಿ ತನ್ನ ಇಬ್ಬರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಬಡತನದ ಮಧ್ಯೆಯೂ ತನ್ನ ಮಕ್ಕಳು ಚನ್ನಾಗಿ ಓದಬೇಕು ಎಂಬ ಕಾಳಜಿ……ಮಕ್ಕಳ ಭವಿಷ್ಯಕ್ಕಾಗಿ ಆಕೆ ವಹಿಸುತ್ತಿರುವ ಮುತುವರ್ಜಿ…… ಶ್ರಮ ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇವಲ 28 ಸೆಕೆಂಡ್ ಗಳ ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಹೃದಯಸ್ಪರ್ಶಿಯಾಗಿರುವ ಈ ದೃಶ್ಯಕ್ಕೆ ಬರೆಯಲು ಪದಗಳೇ ಇಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದರೆ ಅನೇಕರು ಮಹಿಳೆಯ ಕಾರ್ಯಕ್ಕೆ ಸೆಲ್ಯೂಟ್ ಮಾಡಿದ್ದಾರೆ.
https://twitter.com/dc_sanjay_jas/status/1696364609937268966?ref_src=twsrc%5Etfw%7Ctwcamp%5Etweetembed%7Ctwterm%5E1696364609937268966%7Ctwgr%5E1a7ba4e6f62df70c31f14ae08e054e4bf693a97f%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-fruit-seller-teaches-kids-at-her-roadside-stall-video-of-multitasking-mother-goes-viral