ನಾಳೆಯಿಂದ ಹೆಚ್ಚು ಹಾಲಿನ ಜೊತೆ ಹೆಚ್ಚು ಪೋಷಕಾಂಶವು ‘ನಂದಿನಿ’ ಗ್ರಾಹಕರ ಮನೆ ತಲುಪಲಿದೆ -CM ಸಿದ್ದರಾಮಯ್ಯ

ಬೆಂಗಳೂರು : ನಮ್ಮ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿಲ್ಲ, ನಾಳೆಯಿಂದ ಹೆಚ್ಚು ಹಾಲಿನ ಜೊತೆ ಹೆಚ್ಚು ಪೋಷಕಾಂಶವು ನಂದಿನಿ ಗ್ರಾಹಕರ ಮನೆ ತಲುಪಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ  ‘ನಮ್ಮ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿಲ್ಲ. ಒಂದು ಲೀಟರ್ ಪ್ಯಾಕೇಟಿನಲ್ಲಿ ಇನ್ನುಮುಂದೆ 1,050 ಮಿಲೀ, ಅರ್ಧ ಲೀಟರ್ ಪ್ಯಾಕೇಟಿನಲ್ಲಿ 550 ಮಿಲೀ ಹಾಲು ದೊರೆಯಲಿದ್ದು, ಈ 50 ಮಿಲೀ ಹೆಚ್ಚುವರಿ ಹಾಲಿಗೆ ಗ್ರಾಹಕರಿಂದ ರೂ.2 ಸಂಗ್ರಹಿಸಲಾಗುತ್ತದೆ. ಹೀಗಾಗಿ ಲೀಟರ್ ಪ್ಯಾಕೇಟ್ ರೂ.44, ಅರ್ಧ ಲೀಟರ್ ಪ್ಯಾಕೇಟ ರೂ.24ಕ್ಕೆ ಹೆಚ್ಚು ಹಾಲಿನ ಜೊತೆ ಲಭ್ಯವಾಗಲಿದೆ. ಕಳೆದ ಕೆಲವು ತಿಂಗಳಿಂದ ಹಾಲಿನ ಉತ್ಪಾದನೆ ಗಣನೀಯ ಏರಿಕೆಯಾಗಿದ್ದು, ನಿತ್ಯದ ಸರಾಸರಿ ಉತ್ಪಾದನೆ 89 ಲಕ್ಷ ಲೀಟರ್ ನಿಂದ 1 ಕೋಟಿ ಲೀಟರ್ ಸಮೀಪಕ್ಕೆ ಬಂದಿದೆ’.

‘ಡೈಲಿಗಳಲ್ಲಿ ರೈತರು ತರುವ ಹೆಚ್ಚುವರಿ ಹಾಲನ್ನು ನಿರಾಕರಿಸಬಾರದು ಜೊತೆಗೆ ಗ್ರಾಹಕರಿಗೂ ಹೊರೆಯಾಗದ ರೀತಿ ಹಾಲನ್ನು ತಲುಪಿಸುವ ಉದ್ದೇಶದಿಂದ ಕೆ.ಎಂ.ಎಫ್ ಸಂಸ್ಥೆಯು ಈ ನಿರ್ಣಯ ಕೈಗೊಂಡಿದೆ. ನಾಳೆಯಿಂದ ಹೆಚ್ಚು ಹಾಲಿನ ಜೊತೆ ಹೆಚ್ಚು ಪೋಷಕಾಂಶವು ನಂದಿನಿ ಗ್ರಾಹಕರ ಮನೆ ತಲುಪಲಿದೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

https://twitter.com/siddaramaiah/status/1805572017393221943

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read