ಆಪರೇಷನ್ ಥಿಯೇಟರ್ ನಿಂದ ಪರೀಕ್ಷಾ ಹಾಲ್ ಗೆ ಬಂದ ವಿದ್ಯಾರ್ಥಿನಿ ಗಳಿಸಿದ ಅಂಕವೆಷ್ಟು ಗೊತ್ತಾ ?

ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ತನ್ನ ಶಾಲೆಗೆ ಮತ್ತು ಕುಟುಂಬಕ್ಕೆ ಹೆಸರು ತರಬೇಕೆಂದು ಕನಸು ಕಂಡಿದ್ದ ವಿದ್ಯಾರ್ಥಿನಿ ಬಾಳಲ್ಲಿ ಎದುರಾದ ಅದೊಂದು ಹಠಾತ್ ಘಟನೆ ಆಕೆಯ ಧೈರ್ಯವನ್ನ ಕುಂದಿಸಲಿಲ್ಲ. ವ್ಹೀಲ್ ಚೇರ್ ಮೇಲೆ ಬಂದ ಆಕೆ ಪರೀಕ್ಷೆ ಎದುರಿಸಿ ಅತ್ಯುತ್ತಮ ಅಂಕ ಗಳಿಸಿದ್ದಾರೆ.

ಇದು ಮುಂಬೈ ಗೋರೆಗಾಂವ್‌ನ ರಿಯಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿನಿ ರಿತಿಕಾ ಬರಾತ್ ಕಥೆ. ಪರೀಕ್ಷೆಗೂ ಮುನ್ನ ಕಾಣಿಸಿಕೊಂಡ ಹಠಾತ್ ಹೊಟ್ಟೆ ನೋವಿನ ನಂತರ ಆಕೆಗೆ ಅಂಡಾಶಯದ ಗೆಡ್ಡೆ ಇರುವುದು ಪತ್ತೆಯಾಯಿತು. ಮಾಡಿದ ಪರೀಕ್ಷೆಗಳು, MRI ಗಳು ಮತ್ತು CT ಸ್ಕ್ಯಾನ್‌ಗಳಲ್ಲಿ ತುರ್ತು ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಗೊತ್ತಾಯಿತು.

ತಮ್ಮ ಬೋರ್ಡ್ ಪರೀಕ್ಷೆಗಳಿಗೆ ಎರಡು ವಾರಗಳ ಮೊದಲು ಹಿಂದಿನ ವರ್ಷಗಳ ಪೇಪರ್‌ಗಳಿಗೆ ಉತ್ತರಿಸುತ್ತಾ ಅಭ್ಯಾಸದಲ್ಲಿದ್ದ ಇತರ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ, ರಿತಿಕಾ ಬಾರಾತ್ ಆಪರೇಷನ್ ಥಿಯೇಟರ್‌ನಲ್ಲಿದ್ದರು.

ರಿತಿಕಾ ತನ್ನ ಮೊದಲ ಪರೀಕ್ಷೆಗೆ ಕೆಲವು ದಿನಗಳ ಮೊದಲು ಡಿಸ್ಚಾರ್ಜ್ ಆಗಿದ್ದಳು. ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಆಕೆ ವ್ಹೀಲ್ ಚೇರ್ ಮೇಲೆ ಬಂದು ಪರೀಕ್ಷೆ ಬರೆದಿದ್ದಾಳೆ. 9ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ 99.2% ಅಂಕ ಗಳಿಸಿರುವ ರಿತಿಕಾ ಎಲ್ಲರಿಗೂ ಮಾದರಿ.

ನನಗೆ ನಡೆಯಲು ಸಾಧ್ಯವಾಗಲಿಲ್ಲ, ಮತ್ತು ನಾನು ತುಂಬಾ ದುರ್ಬಲವಾಗಿದ್ದೆ ಹಾಗು ದಣಿದಿದ್ದೆ. ಈ ವೇಳೆ
ನಾನು ಅನುಭವಿಸಿದ ಎಲ್ಲಾ ಮಾನಸಿಕ ಮತ್ತು ದೈಹಿಕ ಸಂಕಟದ ನಡುವೆಯೂ ನನ್ನ ಕುಟುಂಬ, ಪ್ರಾಂಶುಪಾಲರು ಮತ್ತು ಶಾಲಾ ಶಿಕ್ಷಕರು ನನ್ನ ಬೆಂಬಲಕ್ಕೆ ಬಂದರು ಮತ್ತು ನನ್ನನ್ನು ಬಲಶಾಲಿಯಾಗಲು ಪ್ರೇರೇಪಿಸಿದರು ಎಂದು ರಿತಿಕಾ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read