ಕೋಲ್ಕತ್ತಾ: ದುಷ್ಕರ್ಮಿಗಳು ಸ್ನೇಹಿತೆಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ಕಂಡು ತಡೆಯಲು ಹೋದ ಯುವಕನನ್ನೇ ಮೂವರು ಆರೋಒಇಗಳು ಹೊಡೆದು ಕೊಂದ ಘಟನೆ ಕೋಲ್ಕತ್ತಾದ ನ್ಯೂ ಟೌನ್ ನಲ್ಲಿ ನಡೆದಿದೆ.
ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ದೌರ್ಜನ್ಯವೆಸಗುತ್ತಿದ್ದರು. ಈ ವೇಳೆ ಬಂದಆಕೆಯ ಸ್ನೇಹಿತ ತಡೆಯಲು ಮುಂದಾಗಿದ್ದಾನೆ. ಯುವಕನ ತಲೆ ಮೇಲೆ ಬಿದುರಿನ ದೊಣ್ಣೆಯಿಂದ ಹೊಡೆದು ಆರೋಪಿಗಳು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ. ಮ್ಋತ ಯುವಕನನ್ನು ಸಂಕೇತ್ ಚಟರ್ಜಿ ಎಂದು ಗುರುತಿಸಲಾಗಿದೆ.
ಸಂಕೇತ್ ತನ್ನ ಸ್ನೇಹಿತೆಯೊಂದಿಗೆ ಜಗಳವಾಡಿದ್ದ. ಆಕೆ ಬೆಳಗಿನ ಜಾವ 1:30ರ ಸುಮಾರಿಗೆ ಸಂಕೇತ್ ಮನೆಯಿಂದ ಹೊರಬಂದಿದ್ದಾಳೆ. ನಡೆದುಕೊಂಡು ಮುಖ್ಯ ರಸ್ತೆಗೆ ಬಂದ ಯುವತಿಯನ್ನು ರಸ್ತೆ ಪಕ್ಕದಲ್ಲಿ ಕುಳಿತಿದ್ದಮೂವರು ದುರುಳರು ಎಳೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾರೆ. ಯುವತಿಯನ್ನು ಹಿಂಬಾಲಿಸಿ ಬಂದ ಸಂಕೇತ್ ಇದನ್ನು ಕಂಡು ಆಕೆಯನ್ನು ರಕ್ಷಿಸಲು ಮುಂದಾಗಿದ್ದಾನೆ. ಈ ವೇಳೆ ಬಿದಿರಿನ ದಿಮ್ಮಿಯಿಂದ ಸಂಕೇತ್ ತಲೆಗೆ ದುಷ್ಕರ್ಮಿಗಳು ಹೊಡೆದಿದ್ದಾರೆ. ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಸಂಕೇತ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತನನ್ನು ಬದುಕಿಸಲು ಸಾಧ್ಯವಾಗಿಲ್ಲ.