ಖಾಸಗಿ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಸಿ ಪ್ರಿಯತಮೆಯನ್ನೇ ಸ್ನೇಹಿತನಿಗೆ ಒಪ್ಪಿಸಿದ ಪ್ರಿಯಕರ

ರಾಮನಗರ: ಪ್ರಿಯತಮೆಯ ಖಾಸಗಿ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಸಿ ಆಕೆಯನ್ನು ಸ್ನೇಹಿತನಿಗೆ ಪ್ರಿಯಕರನೇ ಒಪ್ಪಿಸಿದ ಘಟನೆ ನಡೆದಿದ್ದು, ಇಬ್ಬರನ್ನು ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಜು(21), ರವಿ(33) ಬಂಧಿತ ಆರೋಪಿಗಳು. ಈಗಾಗಲೇ ಮದುವೆಯಾಗಿರುವ ರವಿಗೆ ತನ್ನ ಪ್ರಿಯತಮೆಯನ್ನು ಮಂಜು ಒಪ್ಪಿಸಿದ್ದಾನೆ. ಇಬ್ಬರ ಮೇಲೆಯೂ ಕೇಸು ದಾಖಲಾಗಿದೆ. ರಾಮನಗರದ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಮಂಜು ಆಕೆಯ ಜೊತೆಗಿದ್ದ ಫೋಟೋಗಳನ್ನು ತೆಗೆದುಕೊಂಡಿದ್ದ. ಅವುಗಳನ್ನು ತೋರಿಸಿ ಹುಡುಗಿಯನ್ನು ಪಟಾಯಿಸಿರುವುದಾಗಿ ರವಿಗೆ ತಿಳಿಸಿದ್ದ.

ನೀನು ನೋಡಲು ಚೆನ್ನಾಗಿದ್ದೀಯಾ, ಅನೇಕ ಹುಡುಗಿಯರನ್ನು ಪಟಾಯಿಸಬಹುದು. ನನಗೆ ನಿನ್ನ ಹುಡುಗಿ ಬಿಟ್ಟು ಕೊಟ್ಟರೆ ಮದುವೆ ಆಗುತ್ತೇನೆ ಎಂದು ರವಿ ಹೇಳಿದ್ದಾನೆ. ಸೆ.19 ರಂದು ವಿನಾಯಕ ನಗರದ ಆಂಜನೇಯ ದ್ವಾರದ ಬಳಿ ವಿದ್ಯಾರ್ಥಿನಿಗೆ ಬರುವಂತೆ ಹೇಳಿದ್ದ ಮಂಜು, ರವಿ ಜೊತೆಗೆ ಕಳುಹಿಸಲು ಮುಂದಾಗಿದ್ದಾನೆ. ವಿದ್ಯಾರ್ಥಿನಿ ಆತನೊಂದಿಗೆ ಹೋಗಲು ಒಪ್ಪದಿದ್ದಾಗ ತನ್ನ ಜೊತೆಗಿರುವ ಖಾಸಗಿ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ.

ಈ ವೇಳೆ ಹೆದರಿದ ಯುವತಿ ರವಿ ಜೊತೆಗೆ ಹೋಗಿದ್ದು, ಆಕೆಗೆ ತಾಯಿತದ ದಾರ ಕಟ್ಟಿದ ರವಿ ನಿನ್ನನ್ನು ಮದುವೆಯಾಗಿದ್ದೇನೆ ಎಂದು ಹೇಳಿ ಚಾಮರಾಜನಗರಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆತನ ಸಂಬಂಧಿಕರು ಉಳಿದುಕೊಳ್ಳಲು ಅವಕಾಶ ನೀಡದ ಕಾರಣ ತುಮಕೂರಿಗೆ ಕರೆದುಕೊಂಡು ಬಂದು ಕೂಡಿ ಹಾಕಿದ್ದಾನೆ.

ಯುವತಿ ನಾಪತ್ತೆಯಾದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಂಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ನೇಹಿತ ರವಿ ಜೊತೆಗೆ ಕಳಿಸಿಕೊಟ್ಟಿರುವುದಾಗಿ ತಿಳಿಸಿದ್ದಾನೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಯುವತಿಯನ್ನು ರಕ್ಷಿಸಿ ರವಿ ಹಾಗೂ ಮಂಜುನನ್ನು ವಶಕ್ಕೆ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read