GOOD NEWS: ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಇಲ್ಲಿದೆ ಮುಖ್ಯ ಮಾಹಿತಿ

 ದಾವಣಗೆರೆ: ಸೋಲಾರ್ ರೂಫ್ ಟಾಪ್ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಸರ್ಕಾರ ಪಿಎಂ ಸೂರ್ಯಘರ್ ಮುಪ್ತ್ ಬಿಜಲಿ ಯೋಜನೆ ರೂಪಿಸಿದೆ. ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡು ಮನೆಯಲ್ಲಿ ಉಚಿತ ವಿದ್ಯುತ್ ಪಡೆದು ಖರ್ಚು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಪಿಎಂ ಸೂರ್ಯಘರ್ ಮುಪ್ತ್ ಬಿಜಲಿ ಯೋಜನೆಯ ಕುರಿತಂತೆ ಜಾಗೃತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಈ ಯೋಜನೆ ಅಡಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು, ಮಾನದಂಡ ವೆಚ್ಚದ ಶೇ.60% ರಷ್ಟು ಸಹಾಯಧನ ರೂಪದಲ್ಲಿ ಒದಗಿಸಲಾಗುತ್ತದೆ. 1 ಕಿಲೋವ್ಯಾಟ್‍ಗೆ 30 ಸಾವಿರ ರೂಪಾಯಿ, 2 ಕಿಲೋವ್ಯಾಟ್‍ಗೆ 60 ಸಾವಿರ ರೂಪಾಯಿ ಮತ್ತು 3 ಕಿಲೋವ್ಯಾಟ್‍ಗೆ 78 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ತಮಗೆ ಸಾಕಾಗುವಷ್ಟು ವಿದ್ಯುತ್ ಬಳಸಿದ ಮೇಲೆ ವಿದ್ಯುತ್‍ನ್ನು ಬೆಸ್ಕಾಂಗೆ ಮಾರಾಟ ಮಾಡಲು ಅವಕಾಶ ಇದೆ.

ಈ ಯೋಜನೆಯ ಲಾಭ ಪಡೆಯಲು ಯಾವುದೇ ಆರ್ಥಿಕ ಮಿತಿ ಇರುವುದಿಲ್ಲ. ಎಲ್ಲಾ ವರ್ಗದ ಗ್ರಾಹಕರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ತಮ್ಮ ಮನೆ ಆರ್‍ಸಿಸಿ ಹೊಂದಿ ಕನಿಷ್ಠ 10/10 ಸ್ಥಳಾವಕಾಶ ಇದ್ದಲ್ಲಿ ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಫೋಟೋದೊಂದಿಗೆ pmsuryaghar.gov.in ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದು, 1500 ರೂ. ನೋಂದಣಿ ಶುಲ್ಕವಿರುತ್ತದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read