Free bus travel: ರಾಜ್ಯದ ಮಹಿಳೆಯರ ಗಮನಕ್ಕೆ; ಬಸ್ ಹತ್ತುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ

ಬೆಂಗಳೂರು : ಜೂನ್ 11 ರಿಂದ ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ (free bus service) ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಭರದ ಸಿದ್ದತೆ ನಡೆಸಿದ್ದು, ಮಹಿಳೆಯರಿಗೆ ಫ್ರೀ ಟಿಕೆಟ್ ನೀಡಲು ಸಾರಿಗೆ ಇಲಾಖೆ ಸಿದ್ದತೆ ನಡೆಸಿದೆ. ಮಹಿಳೆಯರು ಬಸ್ ಹತ್ತುವ ಮುನ್ನ ಈ ನಿಬಂಧನೆಗಳ (conditions) ಬಗ್ಗೆ ತಿಳಿದುಕೊಳ್ಳುವುದು ಒಳಿತು.

1) ಬಸ್ ಹತ್ತುವ ಮಹಿಳಾ ಪ್ರಯಾಣಿಕರಿಗೆ ಗುರುತಿನ ಚೀಟಿ (Identity card) ಹೊಂದಿರತಕ್ಕದ್ದು, ಅದನ್ನು ಪರಿಶೀಲಿಸಿ ಕಂಡಕ್ಟರ್ ಟಿಕೆಟ್ ನೀಡಲಿದ್ದಾರೆ.

2) ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪಾಸ್ (Free bus pass) ಯೋಜನೆ ಅನ್ವಯವಾಗಲಿದೆ, ಬೇರೆ ರಾಜ್ಯಗಳಿಗೆ ತೆರಳುವ ಬಸ್ ಗಳಲ್ಲಿ ಈ ಸೌಲಭ್ಯ ಇರಲ್ಲ.

3) ಎಸಿ ಹಾಗೂ ಐಷಾರಾಮಿ ಬಸ್ (AC and luxury bus) ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರಲ್ಲ

4) ಬಿಬಿಎಂಪಿ, ಕೆ ಎಸ್ ಆರ್ ಟಿ ಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್ ಗಳಲ್ಲಿ ನೀವು ಉಚಿತವಾಗಿ ಪ್ರಯಾಣಿಸಬಹುದು. ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಪ್ರಯಾಣ ಮಾಡಲು ಮಹಿಳೆಯರಿಗೆ ಅವಕಾಶ ನೀಡಲಾಗಿದೆ

ಮೊದಲು ಮಹಿಳೆಯರಿಗೆ ಬಸ್ ಗಳಲ್ಲಿ ಪ್ರಯಾಣಿಸಲು ಪ್ರತ್ಯೇಕ ಪಾಸ್ (A separate pass)
ನೀಡಲಾಗುವುದಿಲ್ಲ ಬದಲಿಗೆ, ಮಹಿಳೆಯರು ತಮ್ಮ ಫೋಟೋ ಹಾಗೂ ವಿಳಾಸ ದೃಢೀಕರಣಗೊಳಿಸುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ವೋಟರ್ ಐಡಿ ತೋರಿಸಿ ಪ್ರಯಾಣಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read