ನಿರ್ಮಾಪಕನಿಂದ ವಂಚನೆ, ಕೊಲೆ ಬೆದರಿಕೆ: ಎಫ್ಐಆರ್ ದಾಖಲು

ಬೆಂಗಳೂರು: ನಿರ್ಮಾಪಕನಿಂದ ವಂಚನೆ, ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ. ನಿರ್ಮಾಪಕ ಗಿರೀಶ್ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ನಿರ್ಮಾಪಕ ಗಿರೀಶ್ ವಿರುದ್ಧ ನಿರ್ದೇಶಕ ಮತ್ತು ನಟ ರೂಪೇಶ್ ರಾಜ್ ದೂರು ನೀಡಿದ್ದಾರೆ. ‘ಧೂಳಿಪಟ’, ‘ಸಾರಿ ಕಣೇ’ ಚಿತ್ರಗಳಿಗೆ ಗಿರೀಶ್ ನಿರ್ಮಾಪಕರಾಗಿದ್ದು, ಈ ಎರಡೂ ಚಿತ್ರಗಳಿಗೆ ರೂಪೇಶ್ ರಾಜ್ ನಾಯಕ, ನಿರ್ದೇಶಕರಾಗಿದ್ದಾರೆ. ಚಿತ್ರೀಕರಣದ ವೇಳೆ ರೂಪೇಶ್ ಅವರ ಬಳಿ ಗಿರೀಶ್ ಹಣ ಕೇಳಿದ್ದರು, 33 ಲಕ್ಷ ರೂಪಾಯಿ ಹಣ ಸಾಲ ನೀಡಿದ್ದರು. ಬೇರೆಯವರಿಂದಲೂ ಹಣ ಕೊಡಿಸಿದ್ದರು. ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಗಿರೀಶ್ ಅಂಡ್ ಗ್ಯಾಂಗ್ ವಿರುದ್ಧ ರೂಪೇಶ್ ದೂರು ನೀಡಿದ್ದಾರೆ. ನಿರ್ಮಾಪಕ ಗಿರೀಶ್, ಅಂಜುಮ್, ವಿ.ಕೆ. ಮೂರ್ತಿ, ಮೋಹನ್ ಅವರ ವಿರುದ್ಧ ದೂರು ನೀಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read