BREAKING: ಸರ್ಕಾರಿ ನೌಕರಿ, ಕಾಮಗಾರಿ ಗುತ್ತಿಗೆ ಕೆಲಸ ಕೊಡಿಸುವುದಾಗಿ ವಂಚನೆ; ಶಾಸಕ ಅಜಯ್ ಸಿಂಗ್ ಮಾಜಿ ಆಪ್ತ ಸಹಾಯಕ ಅರೆಸ್ಟ್

ಕಲಬುರ್ಗಿ: ಸರ್ಕಾರಿ ನೌಕರಿ, ಕಾಮಗಾರಿ ಗುತ್ತಿಗೆ ಕೆಲಸ ಕೊಡಿಸುವುದಾಗಿ ವಂಚಿಸಿದ ಆರೋಪದಲ್ಲಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಮಾಜಿ ಆಪ್ತ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ.

ಪರಶುರಾಮ್ ಬಂಧಿತ ಆರೋಪಿ. ಪರಶುರಾಮ್ ಜೇವರ್ಗಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ ಮಾಜಿ ಆಪ್ತಕಾರ್ಯದರ್ಶಿಯಾಗಿದ್ದ. ಸರ್ಕಾರಿ ನೌಕರಿ, ಕಾಮಗಾರಿ ಗುತ್ತಿಗೆ ಕೆಲಸ ಕೊಡಿಸುವುದಾಗಿ ಬೀದರ್ ಮೂಲದ ಕಿರಣ್ ಕುಮಾರ್ ಎಂಬುವವರಿಗೆ 14.90 ಲಕ್ಷ ರೂಪಾಯಿಯನ್ನು ವಂಚಿಸಿದ್ದ.

ಕಿರಣ್ ನೀಡಿದ್ದ ದೂರಿನ ಆಧಾರದ ಮೇಲೆ ಆರೋಪಿ ಪರಶುರಾಮ್ ನನ್ನು ಬಂಧಿಸಲಾಗಿದೆ. ಆರೋಪಿ ಅರೆಸ್ಟ್ ಆಗುತ್ತಿದ್ದಂತೆ ಆತನ ಮತ್ತಷ್ಟು ವಂಚನೆಗಳು ಬೆಳಕಿಗೆ ಬಂದಿವೆ. 39 ಜನರಿಗೆ ಬರೋಬ್ಬರಿ 1.50 ಕೋಟಿ ವಂಚಿಸಿದ್ದಾನೆ ಎಂಬುದು ತಿಳಿದುಬಂದಿದೆ.

ಸಿಕ್ಕಿಬೀಳಬಾರದೆಂದು ತಲೆ ಬೋಲಿಸಿಕಿಒಂಡು, ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ಅಡಗಿದ್ದ. ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read