ಹಲವು ರೋಗ ಪರಿಹರಿಸುತ್ತೆ ಸಾಂಬ್ರಾಣಿ ಎಲೆ

ಪ್ರತಿಯೊಬ್ಬರೂ ತಮ್ಮ ಹಿತ್ತಲಲ್ಲಿ ಇಲ್ಲವೇ ಕೈತೋಟದಲ್ಲಿ ಸಾಂಬ್ರಾಣಿ ಎಲೆಯನ್ನು ಬೆಳೆಸಿರುತ್ತೀರಿ. ಅದರ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?

ಸಂಜೀವಿನಿ ಗಿಡವಾದ ದೊಡ್ಡಪತ್ರೆ ಅಥವಾ ಸಾಂಬ್ರಾಣಿ ಎಲೆಯಲ್ಲಿ ನೀರಿನಂಶ ಹೆಚ್ಚಿದ್ದು ಹಲವಾರು ಔಷಧಿಯ ಗುಣಗಳನ್ನು ಹೊಂದಿದೆ. 6 ತಿಂಗಳ ಮಗುವಿನಿಂದ ಹಿಡಿದು 6 ವರ್ಷದ ಮಕ್ಕಳವರೆಗೆ ಶೀತ ಕೆಮ್ಮು ಸಮಸ್ಯೆಗೆ ಈ ಸೊಪ್ಪು ರಾಮಬಾಣ. ಇದನ್ನು ಸ್ವಚ್ಛವಾಗಿ ತೊಳೆದು ಕಾವಲಿಯ ಮೇಲಿಟ್ಟು ಬಿಸಿ ಮಾಡಿ ರಸ ಹಿಂಡಿ ಜೇನುತುಪ್ಪದೊಂದಿಗೆ ಮಕ್ಕಳಿಗೆ ಕೊಟ್ಟರೆ ಶೀತ, ಕೆಮ್ಮು, ಕಫದ ಸಮಸ್ಯೆ ನಿವಾರಣೆಯಾಗುತ್ತದೆ.

ಕಂಬಳಿ ಹುಳುವಿನಂಥ ಕೀಟಗಳು ಕಚ್ಚಿದ ಜಾಗಕ್ಕೆ ಎಲೆಯನ್ನು ಜಜ್ಜಿ ಉಜ್ಜಿದರೆ ಉರಿ ಇಲ್ಲವಾಗುತ್ತದೆ. ದೊಡ್ಡಪತ್ರೆ ಎಲೆಯನ್ನು ಜಜ್ಜಿ ಅದರ ವಾಸನೆಯನ್ನು ಸೇವಿಸಿದರೆ ಕಟ್ಟಿದ ಮೂಗಿನ ಸಮಸ್ಯೆಯಿಂದ ನಿವಾರಣೆ ಹೊಂದಬಹುದು. ಗ್ಯಾಸ್ಟ್ರಿಕ್ ಕೂಡ ಈ ದೊಡ್ಡ ಪತ್ರೆ ಎಲೆಯಿಂದ ದೂರವಾಗುತ್ತದೆ. ರಕ್ತವನ್ನು ಶುದ್ಧಿಕರಿಸುತ್ತದೆ. ಚಟ್ನಿ ತಂಬುಳಿ ಮಾಡಿಕೊಂಡು ಕೂಡ ಈ ದೊಡ್ಡ ಪತ್ರೆ ಎಲೆಯನ್ನು ಬಳಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read