`ಕಾವೇರಿ’ ನೀರಿಗಾಗಿ ತಮಿಳುನಾಡು ಕ್ಯಾತೆ : ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು : ಕಾವೇರಿ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಕಾವೇರಿ ನೀರು ಬಿಡುಗಡೆ ಸಂಬಂಧ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ.

ಜೂನ್ 1 ರಂದು ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಒಟ್ಟು 24.352 ಟಿಎಂಸಿ ನೀರಿತ್ತು. ಅದೇ ರೀತಿ ಮೆಟ್ಟೂರು ಜಲಾಶಯದಲ್ಲಿ 69.77 ಟಿಎಂಸಿ, ಭವಾನಿ ಸಾಗರ ಜಲಾಶಯದಲದಲಿ 16.653 ಟಿಎಂಸಿ ಇದ್ದು, ಬಿಳಿಗುಂಡ್ಲು ಮಾಪನ ಕೇಂದ್ರದಿಂದ 6-8-2023 ಕ್ಕೆ 14.054 ಟಿಎಂಸಿ ನೀರು ಹೋಗಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಒಟ್ಟು ತಮಿಳುನಾಡಿದ ಮೆಟ್ಟೂರು ಡ್ಯಾಮನಲ್ಲಿ ಈ ವರ್ಷ 83.831ಟಿಎಂಸಿ ನೀರು ಬಂದಿರುತ್ತದೆ.

ತಮಿಳುನಾಡು ಕುರುವೈ ಬೆಳೆಗೆ 1 ಲಕ್ಷ ಎಂಬತ್ತು ಸಾವಿರ ಎಕರೆ ಬೆಳೆ ಸಿಡಬ್ಲುಡಿಟಿ ಪಕ್ರಾರ ಬೆಲೆಯಬೇಕು ಹಾಗೂ  32 ಟಿಎಂಸಿ ನೀರು ಬಳಸಬೇಕು. ಆದರೆ, ತಮಿಳುನಾಡು 7-8-23 ಕ್ಕೆ 60.97 ಟಿಎಂಸಿ ನೀರು ಕುರುವೈ ಬೆಳೆಗೆ ಬಳಕೆ ಮಾಡಿದ್ದು ಸಿಡಬ್ಲುಡಿಟಿ ಆದೇಶದ ಎರಡು ಪಟ್ಡು  ಹೆಚ್ಚಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇರುವುದನ್ನು ‌ಲೆಕ್ಕಿಸದೇ ಸಿಡಬ್ಲುಡಿಟಿ ಆದೇಶ ಉಲ್ಲಂಘನೆ ಮಾಡಿ ನಾಲ್ಕು ಪಟ್ಡು ಕುರುವೈ ಏರಿಯಾ ಬೆಳೆಗೆ ನೀರನ್ನು ಒದಗಿಸಿದೆ. ಇದನ್ನು ನಮ್ಮ ಅಧಿಕಾರಿಗಳು ಸಿಡಬ್ಲುಎಂಎ ದಲ್ಲಿ ಪ್ರತಿಭಟಿಸದೇ ಸುಮ್ಮನೆ ಇದ್ದದ್ದು ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಿದೆ.

ಈಗಿರುವ ನಮ್ಮ ನಾಲ್ಕು ಡ್ಯಾಮ್ ಗಳ ನಿರಿನ ಮಟ್ಟ ಬೆಂಗಳೂರು ನಗರ, ಕಾವೇರಿ ಜಲಾನಯನ ಪ್ರದೇಶದ ನಗರ ಮತ್ತು ಗ್ರಾಮಗಳ ಕುಡಿಯುವ ನೀರಿಗೆ ಕೊರತೆಯಾಗುತ್ಗದೆ. ಅದೇ ರೀತಿ ಕಾವೇರಿ ‌ಜಲಾನಯನ ಪ್ರದೇಶದ ಕರೀಫ್ ಬೆಳೆಗಳಿಗೆ ನಿರಿನ ಕೊರತೆಯಾಗುತ್ತದೆ. ಹೀಗಾಗಿ ನೀರು ಬಿಡುವುದು ಕರ್ನಾಟಕದ ಜನತೆ ಮತ್ತು ರೈತರನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ.

ತಮಿಳುನಾಡಿಗೆ ಸೌಥ್ ವೆಸ್ಟ್ ಮತ್ತು ನಾರ್ಥ್  ಈಸ್ಟ್ ಮಾನಸೂನ್ ಮಳೆ ಆಗುತ್ತಿರುವುದರಿಂದ ನಮಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಈ ವಾಸ್ತವಾಂಶದ ಮೇಲೆ ನಾವು ಗಟ್ಟಿ ನಿಲುವು ತೆಗೆದುಕೊಳ್ಳಬೇಕೆಂದು ನಾನು ತಮ್ಮಲ್ಲಿ ಆಗ್ರಹ ಮಾಡುತ್ತೇನೆ.  ಹಾಗು ತಾವು ಕಾವೇರಿ ಜಲಾನಯನ ಪ್ರದೇಶದ ನೀರಿನ ಹಿತಾಸಕ್ತಿ ಕಾಪಾಡುತ್ತೀರೆಂದು ನಂಬಿರುವೆ ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read