ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ ಶತಾಯುಷಿ ; ಖುಷಿಯ ಬದುಕು ಸಾಕು ಎಂದ ವೃದ್ದೆ | Watch

ದೀರ್ಘಾಯುಷ್ಯದ ರಹಸ್ಯ ಏನು ? ಕಟ್ಟುನಿಟ್ಟಿನ ಆಹಾರಕ್ರಮ, ಕಠಿಣ ವ್ಯಾಯಾಮ, ಶಿಸ್ತಿನ ಜೀವನಶೈಲಿ ಇತ್ಯಾದಿಗಳ ಬಗ್ಗೆ ಅಂತರ್ಜಾಲದಲ್ಲಿ ಹಲವಾರು ಸಲಹೆಗಳು ಸಿಗುತ್ತವೆ. ಆದರೆ ಇತ್ತೀಚೆಗೆ ಶತಕ ದಾಟಿದ ಇಬ್ಬರು ಮಹಿಳೆಯರು ಇದಕ್ಕೆ ಭಿನ್ನವಾದ ಉತ್ತರ ನೀಡಿದ್ದಾರೆ. ಅವರ ಪ್ರಕಾರ, ದೀರ್ಘಾಯುಷ್ಯದ ಗುಟ್ಟು ಆಹಾರ ಅಥವಾ ವ್ಯಾಯಾಮದಲ್ಲಿಲ್ಲ, ಬದಲಿಗೆ ಜೀವನವನ್ನು ಪೂರ್ಣವಾಗಿ ಆನಂದಿಸುವುದರಲ್ಲಿದೆ.

ಯೂಟ್ಯೂಬ್‌ ವ್ಲಾಗರ್‌ ಯಾಯರ್ ಬ್ರಾಚಿಯಾಹು ಅವರು ಇತ್ತೀಚೆಗೆ ಮೂವರು ಮಹಿಳೆಯರ ಸಂದರ್ಶನ ಮಾಡಿದ್ದರು. ಇಬ್ಬರು ಮಹಿಳೆಯರಿಗೆ 100 ಮತ್ತು 101 ವರ್ಷ ವಯಸ್ಸಾಗಿದ್ದರೆ, ಮೂರನೇ ಮಹಿಳೆಗೆ 90 ವರ್ಷ ವಯಸ್ಸು. ಈ ಸಂದರ್ಶನದಲ್ಲಿ ಅವರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಂತೋಷವನ್ನು ಕಂಡುಕೊಳ್ಳುವುದು, ಪುಸ್ತಕಗಳನ್ನು ಓದುವುದು ಮತ್ತು ಸಂತೋಷದ ಸಾಮಾಜಿಕ ಜೀವನವನ್ನು ನಡೆಸುವುದು ದೀರ್ಘಾಯುಷ್ಯದ ಗುಟ್ಟು ಎಂದು ಅವರು ಹೇಳಿದ್ದಾರೆ.

ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಶತಾಯುಷಿಗಳ ಮಾತಿಗೆ ಸಹಮತ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅವರ ಸಲಹೆಗಳು ಪ್ರಾಯೋಗಿಕವಾಗಿಲ್ಲ ಎಂದು ವಾದಿಸಿದ್ದಾರೆ. ಒಬ್ಬ ವ್ಯಕ್ತಿಯು “ಅವರ ಮಾತಿನಲ್ಲಿ ನನಗೆ ಕೇಳಿಬಂದದ್ದು ಇಷ್ಟೇ, 1. ನಿಮ್ಮನ್ನು ಪ್ರೀತಿಸಿ, 2. ನಿಮ್ಮ ಜೀವನವನ್ನು ಪ್ರೀತಿಸಿ, 3. ಜೀವನದಲ್ಲಿ ಒತ್ತಡಕ್ಕೆ ಒಳಗಾಗಬೇಡಿ, ಅದನ್ನು ಹಾಗೆಯೇ ಬದುಕಿ, 4. ನೀವಾಗಿರಿ” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು “ಆರ್ಥಿಕ ಸ್ವಾತಂತ್ರ್ಯವೇ ಮುಖ್ಯ” ಎಂದು ಹೇಳಿದ್ದಾರೆ. ಮೂರನೆಯವರು, “ನಿಮ್ಮ ಸಂದರ್ಶನಗಳು ನನಗೆ ತುಂಬಾ ಇಷ್ಟವಾದವು! ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಮತ್ತು ತಮ್ಮ ಕಥೆಗಳನ್ನು ಹಂಚಿಕೊಂಡ ಎಲ್ಲಾ ಹಿರಿಯರಿಗೆ ಧನ್ಯವಾದಗಳು!” ಎಂದು ಬರೆದಿದ್ದಾರೆ. ನಾಲ್ಕನೆಯವರು, “ವ್ಯಾಯಾಮ ಮಾಡಬೇಡಿ ಎನ್ನುವುದು ಇದು ಕೆಟ್ಟ ಸಲಹೆ!” ಎಂದು ಪ್ರತಿಕ್ರಿಯಿಸಿದ್ದಾರೆ.

ಯಾಯರ್ ಬ್ರಾಚಿಯಾಹು ಯಾರು ?

ಅವರ ಯೂಟ್ಯೂಬ್ ಚಾನೆಲ್ ಪ್ರಕಾರ, ಅವರು ಎಲ್ಲಾ ವರ್ಗದ ಜನರೊಂದಿಗೆ, ವಿಶೇಷವಾಗಿ ಹಿರಿಯರೊಂದಿಗೆ ಸಂವಹನ ನಡೆಸಿ, ಅವರ ಜೀವನ ಕಥೆಗಳನ್ನು ತಿಳಿದುಕೊಳ್ಳುವ ವ್ಲಾಗರ್. “ವಿವಿಧ ಜನರೊಂದಿಗೆ ಹೃದಯಸ್ಪರ್ಶಿ ಸಂವಾದಗಳ ಮೂಲಕ, ನಿಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಲು ಅವರ ಜ್ಞಾನ, ಜೀವನ ಪಾಠಗಳು ಮತ್ತು ಕಥೆಗಳನ್ನು ನಿಮ್ಮ ಮುಂದೆ ತರುತ್ತೇನೆ” ಎಂದು ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬರೆಯಲಾಗಿದೆ.

 

View this post on Instagram

 

A post shared by Yair Brachiyahu (@yairbrachiyahu)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read