BREAKING: ತಡರಾತ್ರಿ ಹಠಾತ್ ದಾಳಿ ಮಾಡಿದ ಕಾಡಾನೆ: ವಾಚರ್ ಬಲಿ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕಾಡಾನೆ ದಾಳಿಗೆ ವಾಚರ್ ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿನ ಮೇಟಿಕುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಾಚರ್ ಮಹದೇವಸ್ವಾಮಿ(36) ಮತಪಟ್ಟವರು ಎಂದು ಹೇಳಲಾಗಿದೆ. 10 ವರ್ಷಗಳಿಂದ ಹಂಗಾಮಿ ವಾಚರ್ ಆಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಸೊಳ್ಳಾಪುರ ಗ್ರಾಮದ ಬಳಿ ಅರಣ್ಯ ಸಿಬ್ಬಂದಿ ಮೇಲೆ ತಡರಾತ್ರಿ ಕಾಡಾನೆ ಹಠಾತ್ ದಾಳಿ ನಡೆಸಿದೆ.

ಆನೆ ದಾಳಿಯಲ್ಲಿ ವಾಚರ್ ಮಹದೇವಸ್ವಾಮಿ ಮೃತಪಟ್ಟಿದ್ದು, ಮತ್ತೊಬ್ಬ ವಾಚರ್ ರಾಜೇಶ್ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಮಹದೇವಸ್ವಾಮಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read