ಚಿರತೆಯನ್ನು ಕಾಡಿಗೆ ಬಿಡುತ್ತಿರುವ ವಿಡಿಯೋ ಹಂಚಿಕೊಂಡ ಐಎಫ್‌ಎಸ್ ಅಧಿಕಾರಿ

ಚಿರತೆಗಳು ಭಾರತದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಕಾಡು ನಾಶದ ಪರಿಣಾಮ ಚಿರತೆಗಳು ನಗರಕ್ಕೆ ಲಗ್ಗೆಯಿಡುತ್ತಿರುವ ಪ್ರಕರಣಗಳು ಆಗಾಗ ನಡೆಯುತ್ತಿವೆ. ಪ್ರಾಣಿ-ಮಾನವ ಸಂಘರ್ಷ ತಪ್ಪಿಸಲು ಚಿರತೆಯನ್ನು ಸುರಕ್ಷಿತವಾಗಿ ಹಿಡಿದು ಮತ್ತೆ ಕಾಡಿಗೆ ಬಿಡಲಾಗುತ್ತದೆ. ಇದೀಗ ಚಿರತೆಯನ್ನು ಕಾಡಿಗೆ ಬಿಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ರಕ್ಷಿಸಲ್ಪಟ್ಟ ಚಿರತೆಯನ್ನು ಕಾಡಿಗೆ ಬಿಡುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚಿಕ್ಕ ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಚಿರತೆಯನ್ನು ಪಂಜರದಿಂದ ಬಿಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಚಿರತೆ ತನಗೆ ಮುಕ್ತಿ ಸಿಕ್ಕಿದ ತಕ್ಷಣ ಕಾಡಿನತ್ತ ಓಡುತ್ತದೆ.

ಚಿರತೆ ಸ್ವಲ್ಪ ಆತುರದಲ್ಲಿದೆ. ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಕಾಡಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಕಸ್ವಾನ್ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಭಾನುವಾರ ಪೋಸ್ಟ್ ಮಾಡಲಾದ ವಿಡಿಯೋ 29,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಅರಣ್ಯ ಇಲಾಖೆಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

https://twitter.com/ParveenKaswan/status/1657790515423891456?ref_src=twsrc%5Etfw%7Ctwcamp%5Etweetembed%7Ctwterm%5E1657790515423891456%7Ctwgr%5E685fdf7f2a8d5de2881cfd03202cc867443a74c7%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-forest-officer-shares-video-of-caged-leopard-being-released-into-the-wild-4037692

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read