ಈ ಕಾರಣಕ್ಕೆ ಅಪಾಯಕಾರಿ ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ…..!

ಆಹಾರ ಮತ್ತು ನೀರು ಎರಡೂ ಆರೋಗ್ಯಕ್ಕೆ ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ 3-4 ಲೀಟರ್ ನೀರು ಕುಡಿದರೆ ಅನೇಕ ರೋಗಗಳಿಂದ ದೂರವಿರಬಹುದು. ಹೆಚ್ಚಿನ ಜನರು ಊಟ-ಉಪಹಾರ ತಿನ್ನುವಾಗ ಅಥವಾ ತಿಂದ ತಕ್ಷಣ ನೀರು ಕುಡಿಯುತ್ತಾರೆ. ಆದರೆ ಈ ರೀತಿ ಮಾಡಬಾರದು.

ಆಹಾರವನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ಅಸಿಡಿಟಿ, ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆಗಳಾಗುತ್ತವೆ. ಇದಲ್ಲದೆ ಆರೋಗ್ಯದ ಮೇಲೆ ಇನ್ನೂ ಅನೇಕ ರೀತಿಯ ದುಷ್ಪರಿಣಾಮಗಳು ಉಂಟಾಗುತ್ತವೆ.

ತಿಂದ ತಕ್ಷಣ ನೀರು ಕುಡಿಯುವುದರಿಂದ ಬೊಜ್ಜು ಹೆಚ್ಚಾಗಬಹುದು. ಜೀರ್ಣಕಾರಿ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಗ್ಯಾಸ್ಟ್ರಿಕ್‌ ಕೂಡ ಉಂಟಾಗಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗಬಹುದು.

ಆರೋಗ್ಯ ತಜ್ಞರ ಪ್ರಕಾರ ಆಹಾರವು ದೇಹಕ್ಕೆ ಹೋದಾಗ ಅದನ್ನು ಜೀರ್ಣಿಸಿಕೊಳ್ಳಲು ಕನಿಷ್ಠ ಎರಡು ಗಂಟೆಗಳ ಸಮಯ ಬೇಕು. ಈ ಮಧ್ಯೆ ನೀರು ಕುಡಿದರೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆಹಾರವನ್ನು ಸೇವಿಸಿದ ತಕ್ಷಣ ನೀರು ಕುಡಿಯಬೇಡಿ. ಊಟವಾಗಿ 45 ರಿಂದ 60 ನಿಮಿಷಗಳ ನಂತರ ನೀರನ್ನು ಕುಡಿಯಬೇಕು. ತಿನ್ನುವ ಮೊದಲು ನೀರನ್ನು ಕುಡಿಯಲು ಬಯಸಿದರೆ ಊಟಕ್ಕೂ ಅರ್ಧ ಗಂಟೆ ಮೊದಲು ಕುಡಿಯಬೇಕು.

ಆಹಾರ ಸೇವಿಸಿದ ಸುಮಾರು ಒಂದು ಗಂಟೆಯ ನಂತರ ನೀರು ಕುಡಿದರೆ ತೂಕವು ನಿಯಂತ್ರಣದಲ್ಲಿರುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಈ ಕ್ರಮ ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ.

ತಿಂದ ನಂತರ ಸರಿಯಾದ ಸಮಯಕ್ಕೆ ನೀರು ಕುಡಿದರೆ ಹೊಟ್ಟೆಯಲ್ಲಿ ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಬರುವುದಿಲ್ಲ. ಊಟವಾಗಿ ಒಂದು ಗಂಟೆಯ ಬಳಿಕ ನೀರು ದೇಹವನ್ನು ತಲುಪಿದರೆ ದೇಹವು ಆಹಾರದ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಈ ಅಭ್ಯಾಸದಿಂದ ನಿದ್ದೆ ಕೂಡ ಸುಧಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read