JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ಜ.19 ರಂದು ಕೊಪ್ಪಳದಲ್ಲಿ ‘ಕ್ಯಾಂಪಸ್ ಸಂದರ್ಶನ’ ಆಯೋಜನೆ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜನವರಿ 19 ರಂದು ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ ಹಾಗೂ ಎಂ. ಎಸ್. ಜೆ. ಎಸ್. ಡಬ್ಲ್ಯೂ ಸ್ಟೀಲ್ಸ್ ಪ್ಲಾಂಟ್ ಬಳ್ಳಾರಿ ವತಿಯಿಂದ ಈ ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ.

ಅಪ್ರೆಂಟಿಸ್ ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.  ಎಲೆಕ್ಟ್ರೀಷಿಯನ್, ವೇಲ್ಡರ್, ಟರ್ನರ್, ಎಂಎಂವಿ, ಎಎಂ ಹಾಗೂ ಇತರೆ ವಿವಿಧ ವೃತ್ತಿಗಳಲ್ಲಿ ಉತ್ತೀರ್ಣರಾಗಿ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ (ಟಣಕನಕಲ್, ಕುಷ್ಟಗಿ ರಸ್ತೆ, ಕೊಪ್ಪಳ) ಇವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9008536895, 9448813422, 9742532353 ಸಂಪರ್ಕಿಸಬಹುದು.

ಆಸಕ್ತರು ತಮ್ಮ ಸಂಪೂರ್ಣ ವಿವರಗಳೊಂದಿಗೆ ಜ.19 ರಂದು ಬೆಳಗ್ಗೆ 9 ಗಂಟೆಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read