ಸೂಕ್ಷ್ಮ ಚರ್ಮದವರು ತಕ್ಷಣ ಬೆಳ್ಳಗಾಗಲು ಈ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣುಮಕ್ಕಳಿಗಿದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರೆ. ಹಾಗಾಗಿ ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ನ್ನು ಬಳಸಿ.

ಸೂಕ್ಷ್ಮ ಚರ್ಮ ಹೊಂದಿರುವವರು ಯಾವಾಗಲೂ ವಿವಿಧ ಸೋಂಕುಗಳಿಗೆ ಒಳಗಾಗುತ್ತಾರೆ. ಯಾವುದೇ ಉತ್ಪನ್ನಗಳನ್ನು ಬಳಸುವಾಗ ತುಂಬಾ ಕಾಳಜಿ ವಹಿಸಬೇಕು. ಇಲ್ಲವಾದರೆ ಚರ್ಮದ ಗಂಭೀರ ಸಮಸ್ಯೆಗೆ ತುತ್ತಾಗಬಹುದು. ಹಾಗಾಗಿ ಸೂಕ್ಷ್ಮ ಚರ್ಮ ಹೊಂದಿರುವವರು ತ್ವಚೆ ಬೆಳ್ಳಗಾಗಲು ಈ ಫೇರ್ ನೆಸ್ ಪ್ಯಾಕ್ ಬಳಸಿ.

1 ಚಮಚ ಜೇನುತುಪ್ಪ, 2 ಚಮಚ ಅಲೊವೆರಾ ಜೆಲ್ ಮತ್ತು 1 ಚಮಚ ಸಕ್ಕರೆ ಪುಡಿ, ನೆನೆಸಿದ ಕೇಸರಿದಳಗಳನ್ನು ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ವಾಶ್ ಮಾಡಿ. ಇದನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಹಚ್ಚಿ. ಒಂದು ತಿಂಗಳು ಮಾಡಿದರೆ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read