ಲೈಂಗಿಕ ಕ್ರಿಯೆಗೂ ಮುನ್ನ ಈ ʼಆಹಾರʼಗಳ ಸೇವಿಸದಿರಿ

ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವರು ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಕಾಳಜಿ ವಹಿಸುವ ಕಾರಣ ಅವರು ಸಮಸ್ಯೆಗಳಿಂದ ದೂರ ಇರುತ್ತಾರೆ.

ಆದರೆ, ಕೆಲವರು ಈ ಪದಾರ್ಥಗಳನ್ನು ಸೇವಿಸುವುದರಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಕರಿದ ತಿಂಡಿಗಳನ್ನು ಸೇವಿಸುವುದರಿಂದ ಆಸಕ್ತಿ ಕಡಿಮೆಯಾಗುತ್ತದೆ ಎನ್ನಲಾಗಿದೆ. ಉಪ್ಪು, ಶುಗರ್ ಮೊದಲಾದ ಅಂಶಗಳಿರುವ ಕರಿದ ತಿಂಡಿಗಳನ್ನು ಸೇವಿಸುವುದರಿಂದ ಡೈಜೇಷನ್ ಆಗದೇ ರಕ್ತದೊತ್ತಡ ಕಡಿಮೆ ಆಗಬಹುದಾದ ಸಾಧ್ಯತೆ ಇರುತ್ತದೆ. ಆಲ್ಕೋಹಾಲ್ ಜಾಸ್ತಿ ಸೇವಿಸಿ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಬಾರದು. ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ಬಹು ಬೇಗನೆ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ.

ಇನ್ನು ಲೈಂಗಿಕ ಕ್ರಿಯೆಗೂ ಮೊದಲು ಬೆಳ್ಳುಳ್ಳಿಯಂತಹ ಪದಾರ್ಥ ಸೇವಿಸಬಾರದು. ಇದರಿಂದ ಬಾಯಿಯಲ್ಲಿ ದುರ್ವಾಸನೆ ಬರುತ್ತದೆ. ಅಲ್ಲದೇ, ಚರ್ಮದಿಂದಲೂ ಸ್ಮೆಲ್ ಬರುತ್ತದೆ. ಸಂಗಾತಿಗೆ ಈ ಕಾರಣಕ್ಕಾಗಿ ಕಸಿವಿಸಿಯಾಗುತ್ತದೆ. ಜೊತೆಗೆ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ಶುಗರ್ ಜಾಸ್ತಿಯಾಗುತ್ತದೆ. ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಲೈಂಗಿಕ ಆಸಕ್ತಿ ಕುಂದಬಹುದಾದ ಸಾಧ್ಯತೆ ಇರುತ್ತದೆ.

ಅಧ್ಯಯನವೊಂದರಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಹಾಗಾಗಿ ಆಸಕ್ತಿ ಕಡಿಮೆ ಮಾಡುವ ಕರಿದ ತಿಂಡಿ, ಆಲ್ಕೋಹಾಲ್, ಬೆಳ್ಳುಳ್ಳಿ, ಸಿಹಿ ಪದಾರ್ಥಗಳನ್ನು ಲೈಂಗಿಕ ಕ್ರಿಯೆಗೂ ಮೊದಲು ಸೇವಿಸಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read