ಬಾಸ್ಕೆಟ್​ಬಾಲ್​ ಆಟಕ್ಕೆ ಅಡ್ಡಿಪಡಿಸಿದ ಫುಡ್​ ಡೆಲಿವರಿ ಬಾಯ್​: ವಿಡಿಯೋ ವೈರಲ್​

ನ್ಯೂಯಾರ್ಕ್​: ಉಬರ್ ಈಟ್ಸ್‌ನ ಆಹಾರ ವಿತರಣಾ ಏಜೆಂಟ್ ಆರ್ಡರ್ ಅನ್ನು ತಲುಪಿಸುವ ಪ್ರಯತ್ನದಲ್ಲಿ ಬ್ಯಾಸ್ಕೆಟ್‌ಬಾಲ್ ಆಟವನ್ನು ಅಡ್ಡಿಪಡಿಸಿದ ವಿಡಿಯೋ ವೈರಲ್​ ಆಗಿದೆ. ಫಾಕ್ಸ್‌ಸ್ಪೋರ್ಟ್ಸ್ ಪ್ರಕಾರ, ಲೊಯೊಲಾ ಚಿಕಾಗೊ ಮತ್ತು ಡುಕ್ವೆಸ್ನೆ ನಡುವಿನ ಅಟ್ಲಾಂಟಿಕ್ 10 ಪಂದ್ಯದ ಸಮಯದಲ್ಲಿ ಈ ಘಟನೆ ನಡೆದಿದೆ.

ಮೆಕ್‌ಡೊನಾಲ್ಡ್ಸ್ ಅನ್ನು ಅಲ್ಲಿ ಯಾರೋ ಆರ್ಡರ್​ ಮಾಡಿದ್ದರು. ಅದು ಯಾರು ಎಂದು ಡೆಲವರಿ ಬಾಯ್​ಗೆ ತಿಳಿಯಲಿಲ್ಲ. ಈ ಹಿನ್ನೆಲೆಯಲ್ಲಿ ಆತ ಆಟ ನಡೆಯುತ್ತಿರುವಾಗಲೇ ನೇರವಾಗಿ ಕೋರ್ಟ್​ ಒಳಗೆ ನುಗ್ಗಿದ್ದಾನೆ! ಆರ್ಡರ್ ಮಾಡಿದವನ್ನು ಹುಡುಕುತ್ತಿದ್ದ ಕಾರಣ ಆಟಕ್ಕೆ ತೊಂದರೆಯಾಯಿತು. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಪ್ರಕಾರ, ಡೆಲಿವರಿ ಫುಡ್ ಏಜೆಂಟ್ ಸುಮಾರು 10 ನಿಮಿಷಗಳ ಕಾಲ ಅಲೆದಾಡಿದ್ದಾನೆ. ಅತ ತನಗೆ ಬೇಕಾದವರಿಗಾಗಿ ಹುಡುಕಾಟ ನಡೆಸುತ್ತಿದ್ದ.

ಈ ಹಿನ್ನೆಲೆಯಲ್ಲಿ ಸಂಘಟಕರು ಆಟವನ್ನು ಸಂಕ್ಷಿಪ್ತವಾಗಿ ವಿರಾಮಗೊಳಿಸಬೇಕಾಯಿತು. ಡೆಲಿವರಿ ಬಾಯ್​ ಅನ್ನು ಮೈದಾನಕ್ಕೆ ಹೇಗೆ ಬಿಟ್ಟರು ಎಂಬ ಬಗ್ಗೆ ಕ್ರೀಡಾ ಪ್ರಿಯರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ಡೆಲಿವರಿ ಏಜೆಂಟ್‌ನ ಸಮರ್ಪಣೆಯನ್ನು ಶ್ಲಾಘಿಸುತ್ತಿದ್ದಾರೆ. ಆಟದ ಸಮಯದಲ್ಲಿನ ಭದ್ರತೆಯನ್ನು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ.

https://twitter.com/cnewell15/status/1618422287203733506?ref_src=twsrc%5Etfw%7Ctwcamp%5Etweetembed%7Ctwterm%5E1618422287203733506%7Ctwgr%5Ed08cadc08c2fd9dc0a61645e3aee4126ad416222%7Ctwcon%5Es1_&ref_url=https%3A%2F%2Fwww.ndtv.com%2Foffbeat%2Ffood-delivery-agent-walks-on-to-basketball-court-in-middle-of-a-game-in-us-3726460

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read