ಗುಲಾಬಿ ಗಿಡ ಸೊಂಪಾಗಿ ಬೆಳೆದು ಹೂ ಬಿಡಲು ಇದನ್ನು ಅನುಸರಿಸಿ

ಹೂದೋಟದಲ್ಲಿ ಹೂವಿದ್ದರೆ ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಆದರೆ ಕೆಲವು ಸಲ ಎಷ್ಟೇ ಆರೈಕೆ ಮಾಡಿದರೂ ಗಿಡದಲ್ಲಿ ಸರಿಯಾಗಿ ಹೂ ಬಿಡುವುದಿಲ್ಲ. ಈ ರೀತಿಯಾಗಿ ಗುಲಾಬಿ ಗಿಡ ಬೆಳೆಸಿ ನೋಡಿ.

ಗುಲಾಬಿ ಹೂವಿನ ಗಿಡಕ್ಕೆ ಮಣ್ಣು, ಗೊಬ್ಬರ ಮತ್ತು ಬಿಸಿಲು ಅತ್ಯಗತ್ಯ. ಮಣ್ಣು ಗಟ್ಟಿಯಾಗಿರಬಾರದು. ಮತ್ತು ಕಪ್ಪು ಮಣ್ಣು ಇರಬಾರದು. ಹಾಗೇ ಪ್ರಕಾಶಮಾನವಾದ ಸೂರ್ಯ ಬೆಳಕಿನಲ್ಲಿ ಇಡಬಾರದು. ಗಿಡದ ಬೇರಿಗೆ ಪೆಟ್ಟಾಗದಂತೆ ಮಣ್ಣನ್ನು ಆಗಾಗ ಅಗೆಯುತ್ತಿರಬೇಕು.

 ಗುಲಾಬಿ ಗಿಡಕ್ಕೆ ಮಣ್ಣಿನಲ್ಲಿ ಗೊಬ್ಬರವನ್ನು ಬೆರೆಸಿ ಹಾಕಬೇಕು. ಇದರ ಜತೆಗೆ ದನದ ಸಗಣಿ ಹಾಕಬೇಕು. ಮತ್ತು ಸಿಟ್ರಸ್ ಹಣ್ಣಿನ ಸಿಪ್ಪೆಯನ್ನು ಅದಕ್ಕೆ ಹಾಕಿದರೆ ಚೆನ್ನಾಗಿ ಬೆಳೆಯುತ್ತದೆ. ಪ್ರತಿದಿನ ನೀರು ಹಾಕುತ್ತಿರಬೇಕು. ಅಕ್ಕಿ, ಬೇಳೆ ತೊಳೆದ ನೀರು, ತರಕಾರಿ ತೊಳೆದ, ಬೇಯಿಸಿದ ನೀರು ಹಾಕಿದರೆ ಚೆನ್ನಾಗಿ ಹೂ ಬಿಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read