ಆರ್ಥಿಕವಾಗಿ ವೃದ್ದಿಯಾಗಲು ಈ ನಿಯಮ ಪಾಲಿಸಿ

ಹಣದ ಅವಶ್ಯಕತೆ ಈಗ ಎಲ್ಲರಿಗೂ ಇದೆ. ಆರ್ಥಿಕವಾಗಿ ಬಲಗೊಳ್ಳಲು ದಿನಪೂರ್ತಿ ದುಡಿಯುವ ಜನರಿದ್ದಾರೆ. ಬರೀ ಕೆಲಸ ಮಾಡಿದ್ರೆ ಸಾಲದು. ದೇವರ ಕೃಪೆ ಕೂಡ ನಮ್ಮ ಮೇಲಿರಬೇಕು. ಹಾಗಾಗಿ ಧನ ಪ್ರಾಪ್ತಿಗಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಪ್ರತಿದಿನ ಅಥವಾ ಪ್ರತಿ ಶುಕ್ರವಾರ ಶ್ರೀಸೂಕ್ತ ಅಥವಾ ಲಕ್ಷ್ಮಿ ಸ್ತೋತ್ರವನ್ನು ಪಠಣ ಮಾಡಿ.

ಪ್ರತಿ ವಾರ ಮನೆ ಕ್ಲೀನ್ ಮಾಡುವಾಗ ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ. ಇದ್ರಿಂದ ಕೀಟಾಣುಗಳು ನಾಶವಾಗುವ ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.

ಪ್ರತಿ ಅಮವಾಸ್ಯೆಯಂದು ಮನೆಯನ್ನು ಸ್ವಚ್ಛಗೊಳಿಸಿ. ಮನೆ ಸ್ವಚ್ಛಗೊಳಿಸಿದ ನಂತ್ರ ಐದು ಅಗರಬತ್ತಿಯನ್ನು ಹಚ್ಚಿ.

ಪೂಜೆ ಮಾಡುವ ವೇಳೆ ಮನೆಗೆ ಯಾವುದೇ ಅತಿಥಿ ಬಂದ್ರೆ ಇಲ್ಲವೇ ಸಂಜೆ ದೀಪ ಬೆಳಗುವ ವೇಳೆ ಸೌಭಾಗ್ಯವತಿ ಮನೆಗೆ ಬಂದ್ರೆ ಇದು ಶುಭ ಸಂಕೇತ.

ಯಾವುದೇ ವಸ್ತುವನ್ನು ದಾನ ಮಾಡುವಾಗ ಹೊಸ್ತಿಲಿನಿಂದ ಹೊರಗೆ ನಿಂತು ದಾನ ಮಾಡಬೇಡಿ. ಹೊಸ್ತಿಲಿನ ಒಳಗೆ ನಿಂತು ದಾನ ಮಾಡಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read