ಮಿಕ್ಸರ್, ಗ್ರೈಂಡರ್ ದೀರ್ಘಕಾಲ ಬಾಳಿಕೆ ಬರಲು ಈ ಸಲಹೆ ಪಾಲಿಸಿ

ಅಡುಗೆ ಮನೆಯಲ್ಲಿ ಹೆಚ್ಚಿನವರು ಪದಾರ್ಥಗಳನ್ನು ರುಬ್ಬಲು ಮಿಕ್ಸಿ ಗ್ರೈಂಡರ್ ಬಳಸುತ್ತಾರೆ. ಇದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ. ಆದರೆ ಮಿಕ್ಸಿ, ಗ್ರೈಂಡರ್ ಅನ್ನು ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಇಲ್ಲವಾದರೆ ಅವು ಬೇಗ ಹಾಳಾಗುತ್ತವೆ. ಹಾಗಾಗಿ ಅವು ಹೆಚ್ಚು ಕಾಲ ಬಾಳಿಕೆ ಬರಲು ಈ ಸಲಹೆ ಪಾಲಿಸಿ.

ಕೆಲವರು ಬಿಸಿ ವಸ್ತುಗಳನ್ನು ಹಾಕಿ ರುಬ್ಬುತ್ತಾರೆ. ಇದರಿಂದ ಮಿಕ್ಸಿ ಬೇಗ ಹಾಳಾಗುತ್ತದೆ ಮತ್ತು ಬಿಸಿಗೆ ಮಿಕ್ಸಿಯಲ್ಲಿ ಗಾಳಿ ತುಂಬಿಕೊಂಡು ಮುಚ್ಚಳ ತೆರೆಯುತ್ತದೆ. ಹಾಗಾಗಿ ಪದಾರ್ಥಗಳನ್ನು ತಣ್ಣಗಾಗಿಸಿ ಬಳಿಕ ರುಬ್ಬಿ.

ಕೆಲವರು ಎಲ್ಲಾ ವಸ್ತುಗಳನ್ನು ಒಮ್ಮೆಲೆ ರುಬ್ಬಬೇಕೆಂದು ಮಿಕ್ಸಿಗೆ ಅಗತ್ಯಕ್ಕಿಂತ ಹೆಚ್ಚನ್ನು ಹಾಕಿ ರುಬ್ಬುತ್ತಾರೆ. ಇದರಿಂದ ಮಿಕ್ಸಿಗೆ ಓವರ್ ಲೋಡ್ ಆಗುತ್ತದೆ. ಇದರಿಂದ ಮುಚ್ಚಳ ತೆರೆದುಕೊಳ್ಳುವುದು ಮಾತ್ರವಲ್ಲ ಮಿಕ್ಸಿ ಬೇಗ ಹಾಳಾಗುತ್ತದೆ.

ಮಿಕ್ಸಿಯಲ್ಲಿ ರುಬ್ಬಿದ ತಕ್ಷಣ ಜಾರ್‌ ನ್ನು ತೊಳೆಯದೇ ಹಾಗೇ ಇಡುತ್ತಾರೆ. ಇದರಿಂದ ಮಿಕ್ಸಿ ಬೇಗ ಹಾಳಾಗುತ್ತದೆ. ಹಾಗಾಗಿ ಬಳಸಿದ ತಕ್ಷಣ ಸ್ವಚ್ಛಗೊಳಿಸಿ, ನೀರನ್ನು ಒರೆಸಿ ಇಡಿ. ಇದರಿಂದ ಮಿಕ್ಸಿ ಹೆಚ್ಚುಕಾಲ ಬಾಳಿಕೆ ಬರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read