ನಿಮ್ಮ ಮನೆ ಅಕ್ಕಿಯಲ್ಲೂ ಹುಳ ಆಗುತ್ತಾ…? ಈ ಟಿಪ್ಸ್ ಅನುಸರಿಸಿ

ಮಳೆಗಾಲದಲ್ಲಿ ಅನೇಕ ಸಮಸ್ಯೆ ಶುರುವಾಗುತ್ತದೆ. ಆರೋಗ್ಯ ಮಾತ್ರವಲ್ಲ ಮನೆಯಲ್ಲಿರುವ ಆಹಾರ, ವಸ್ತು ಬೇಗ ಹಾಳಾಗುತ್ತದೆ. ತಣ್ಣನೆಯ ತಾಪಮಾನದಿಂದಾಗಿ ಬಟ್ಟೆಗಳು ಮುಗ್ಗಿದ ವಾಸನೆ ಬರಲು ಶುರುವಾಗುತ್ತದೆ. ಮನೆಯಲ್ಲಿರುವ ಅಕ್ಕಿಯಲ್ಲೂ ಹುಳ ಕಾಣಿಸಿಕೊಳ್ಳುತ್ತದೆ. ಅಕ್ಕಿ ಹಾಳಾಗದಂತೆ ರಕ್ಷಿಸಲು ಕೆಲ ಟಿಪ್ಸ್ ಇಲ್ಲಿದೆ.

ಅಕ್ಕಿಯಲ್ಲಿ ಹುಳ ಆಗ್ಬಾರದೆಂದ್ರೆ ಅಡುಗೆ ಮನೆಯಲ್ಲಿರುವ ಲವಂಗದ ಸಹಾಯವನ್ನು ಪಡೆಯಬಹುದು. ಅಕ್ಕಿ ಪಾತ್ರಗೆ  10-15 ಲವಂಗವನ್ನು ಹಾಕಬೇಕು. ಅಕ್ಕಿಯಲ್ಲಿ ಹುಳ ಆಗದಂತೆ ನೋಡಿಕೊಳ್ಳುತ್ತದೆ.  ಮೊದಲೇ ಹುಳ ಆಗಿದ್ದರೆ ಅದರ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಭಾರತದಲ್ಲಿ ಶತ ಶತಮಾನದಿಂದ ಈ ಟಿಪ್ಸ್ ಅನುಸರಿಸಿಕೊಂಡು ಬರ್ತಿದ್ದಾರೆ. ಅದೇನೆಂದ್ರೆ ಪುದೀನಾ. ಅಕ್ಕಿ ಪಾತ್ರಗೆ ಪುದೀನಾ ಎಲೆಗಳನ್ನು ಹಾಕಿಟ್ಟಲ್ಲಿ

ಅದ್ರ ವಾಸನೆಗೆ ಹುಳ ಬರುವುದಿಲ್ಲ.

ಅಕ್ಕಿಯಲ್ಲಿ ಕೀಟವಾಗಬಾರದೆಂದ್ರೆ ನೀವು ಬೆಳ್ಳುಳ್ಳಿಯನ್ನು ಬಳಸಬಹುದು. ಬೆಳ್ಳುಳ್ಳಿ ಜೊತೆ ಕೆಲವು ಲವಂಗವನ್ನು ಪಾತ್ರೆಗೆ ಹಾಕಿ. ಬೆಳ್ಳುಳ್ಳಿ ಒಣಗಿದ್ರೆ ಅದನ್ನು ತೆಗೆದು ಹೊಸ ಬೆಳ್ಳುಳ್ಳಿ ಹಾಕಿ.

ಲವಂಗದ ಎಲೆಗಳು ಅಕ್ಕಿಯನ್ನು ಹುಳಗಳಿಂದ ರಕ್ಷಿಸಲು ಅತ್ಯುತ್ತಮ, ಪರಿಣಾಮಕಾರಿ ಮಾರ್ಗವಾಗಿದೆ. ಅಕ್ಕಿಯನ್ನು ಗಾಳಿಯಾಡದ ಕಂಟೇನರ್ ನಲ್ಲಿ ಇಡಬೇಕು. ಗಾಳಿ ಸೋಕಿದಲ್ಲಿ ಅಕ್ಕಿಯಲ್ಲಿ ಹುಳವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read