ಮುಖದ ಸೌಂದರ್ಯ ವೃದ್ಧಿಗೆ ಅನುಸರಿಸಿ ಈ ʼಟಿಪ್ಸ್ʼ

ಸೌಂದರ್ಯಕ್ಕೆ ಹುಡುಗಿಯರು ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತದೆ. ಚರ್ಮದ ಮುಚ್ಚಿದ ರಂಧ್ರಗಳನ್ನು ತೆರೆಯಲು ಸ್ಟೀಮ್ ತೆಗೆದುಕೊಳ್ಳುವುದು ಉತ್ತಮ. ಕೆಲವು ಗಿಡಮೂಲಿಕೆ ಉತ್ಪನ್ನಗಳನ್ನು ನೀರಿಗೆ ಹಾಕಿ ಉಗಿ ತೆಗೆದುಕೊಳ್ಳುವುದ್ರಿಂದ ಚರ್ಮ ಹೊಳಪು ಪಡೆಯುತ್ತದೆ.

ಒಣ ಚರ್ಮ ಹೊಂದಿರುವವರು ಕ್ಯಾಮೊಮೈಲ್ ಮತ್ತು ಶ್ರೀಗಂಧದ ಸ್ಟೀಮ್ ತೆಗೆದುಕೊಳ್ಳಬೇಕು. ಇದು ಉರಿಯೂತದ ಗುಣಗಳನ್ನು ಹೊಂದಿರುತ್ತದೆ. ಇದು ಚರ್ಮವನ್ನು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡುತ್ತದೆ. ಕುದಿಯುವ ನೀರಿನಲ್ಲಿ ಕೆಲವು ಹನಿ ಕ್ಯಾಮೊಮೈಲ್ ಎಣ್ಣೆ ಹಾಗೂ  ಶ್ರೀಗಂಧವನ್ನು ಬೆರೆಸಬೇಕು. ನಂತ್ರ ಅದ್ರ ಉಗಿಯನ್ನು ತೆಗೆದುಕೊಳ್ಳಬೇಕು.

ಎಣ್ಣೆಯುಕ್ತ ಚರ್ಮಕ್ಕಾಗಿ ಟಿ-ಟ್ರೀ ಎಣ್ಣೆಯ ಸ್ಟೀಮ್ ಬೆಸ್ಟ್. ಟಿ-ಟ್ರೀ ಎಣ್ಣೆ ಮೊಡವೆಗಳನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಕುದಿಯುವ ನೀರಿನಲ್ಲಿ ಕೆಲವು ಹನಿ ಟಿ-ಟ್ರೀ ಎಣ್ಣೆ ಹಾಕಿ. ನಂತರ ಸ್ಟೀಮ್ ತೆಗೆದುಕೊಳ್ಳಿ. 10 ನಿಮಿಷದ ನಂತ್ರ ಮುಖವನ್ನು ಸ್ವಚ್ಚಗೊಳಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read