ವಿಡಿಯೋ: ಮೊಸಳೆಗೆ ಕೈತುತ್ತು ನೀಡಿ ಸಲಹುತ್ತಿದೆ ಫ್ಲಾರಿಡಾದ ಈ ಜೋಡಿ

ಪ್ರಾಣಿಗಳನ್ನು ಸಾಕಿ ಸಲಹುವುದು ಒಂದು ರೀತಿಯ ಹಿತಾನುಭವ. ನಾಯಿ, ಬೆಕ್ಕು, ಹಸುಗಳನ್ನು ಸಾಕುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇಲ್ಲೊಂದು ಜೋಡಿ ಮೊಸಳೆಯನ್ನು ಸಾಕು ಪ್ರಾಣಿಯಂತೆ ಸಲಹುತ್ತಿರುವುದನ್ನು ನೋಡಬಹುದಾಗಿದೆ.

ಫ್ಲಾರಿಡಾದ ಈ ವ್ಯಕ್ತಿ ತನ್ನ ಸಂಗಾತಿಯೊಂದಿಗೆ ಮೊಸಳೆಯೊಂದಕ್ಕೆ ಕೈತುತ್ತು ನೀಡುತ್ತಿರುವುದನ್ನು ನೋಡಬಹುದಾಗಿದೆ. ಇಷ್ಟೇ ಅಲ್ಲದೇ ಮೊಸಳೆಯ ತಲೆ ಸವರುತ್ತಿರುವುದನ್ನು ಸಹ ನೋಡಬಹುದಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದ್ದು, ಆರು ಲಕ್ಷ ಲೈಕ್ಸ್‌ಗಳನ್ನು ಗಿಟ್ಟಿಸಿದೆ.

“ನಾನು ಮೊಸಳೆಗಳನ್ನು ನಂಬುವುದಿಲ್ಲ. ಈ ಜೋಡಿಗೆ ಮೊಸಳೆಗಳ ಕುರಿತು ಅರಿವಿಲ್ಲ,” ಎಂದು ವಿಡಿಯೋ ನೋಡಿದ ನೆಟ್ಟಿಗರೊಬ್ಬರು ತಿಳಿಸಿದ್ದಾರೆ. “ಇದೇ ಕಾರಣಕ್ಕೆ ಮೊಸಳೆಗಳು ಜನರು, ಪ್ರಾಣಿಗಳು ಹಾಗೂ ಮಕ್ಕಳ ಮೇಲೆ ದಾಳಿ ಮಾಡುತ್ತವೆ. ಈ ಇಬ್ಬರನ್ನೂ ಬಂಧಿಸಬೇಕು. ಫ್ಲಾರಿಡಾದಲ್ಲಿ ಹೀಗೆ ಮಾಡುವುದು ಕಾನೂನು ಬಾಹಿರ. ಇದೇ ಕಾರಣಕ್ಕೆ ಮೊಸಳೆಗಳು ಜನರ ಮೇಲೆ ದಾಳಿ ಮಾಡಿ ಅವುಗಳನ್ನು ಕೊಲ್ಲಲಾಗುತ್ತಿದೆ,” ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

https://youtu.be/mVvxDtu_NlA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read