ಬರೋಬ್ಬರಿ 100 ಕೆಜಿ ಗಾಂಜಾ ಸೇವನೆ ಮಾಡಿದ ಕುರಿಗಳ ಹಿಂಡು: ಮುಂದೇನಾಯ್ತು ಗೊತ್ತಾ ?

ಗ್ರೀಕ್​ ಪಟ್ಟಣದಲ್ಲಿ ವಾಸವಿದ್ದ ಕುರಿಗಳ ಹಿಂಡೊಂದು ಬರೋಬ್ಬರಿ 100 ಕೆಜಿ ಗಾಂಜಾವನ್ನು ತಿಂದಂತಹ ಘಟನೆಯೊಂದು ವೈರಲ್​ ಆಗಿದೆ. ಗ್ರೀಸ್​, ಲಿಬಿಯಾ, ಟರ್ಕಿ ಹಾಗೂ ಬಲ್ಗೇರಿಯಾದಲ್ಲಿ ಮಾರಣಾಂತಿಕ ಚಂಡಮಾರುತ ಬೀಸಿದ್ದು ಈ ಪ್ರಾಣಿಗಳು ಗ್ರೀಕ್​ನ ಪಟ್ಟಣವೊಂದರಲ್ಲಿ ಆಶ್ರಯ ಪಡೆದಿದ್ದವು ಎನ್ನಲಾಗಿದೆ.

ಮರಿಜುವಾನಾ ಗಾಂಜಾದ ಗಿಡಗಳನ್ನು ಗ್ರೀಸ್​ ಮಧ್ಯಭಾಗದಲ್ಲಿರುವ ಥೆಸಲಿಯಾ ಅಲ್ಮಿರೋಸ್​ ಪಟ್ಟಣದ ಸಮೀಪದಲ್ಲೇ ಇರೋ ಹಸಿರು ಮನೆಯಲ್ಲಿ ಬೆಳೆಯಲಾಗುತ್ತಿತ್ತು ಎಂದು ಹೇಳಲಾಗಿದೆ.

ಗಾಂಜಾ ಗಿಡಗಳನ್ನು ಸೇವಿಸಿ ಬಂದಿದ್ದ ಕುರಿಗಳು ಕುರಿಗಾಹಿಯ ಎದುರು ವಿಚಿತ್ರವಾಗಿ ವರ್ತಿಸುತ್ತಿದ್ದವು. ಇದನ್ನು ಗಮನಿಸಿದ ಕುರಿಗಾಹಿಗೆ ಇಲ್ಲೇನೋ ಸಮಸ್ಯೆ ಆಗಿದೆ ಅನ್ನೋದು ಅರಿವಿಗೆ ಬಂದಿದೆ. ಆಡುಗಳು ಎತ್ತರೆತ್ತರಕ್ಕೆ ಜಿಗಿಯುತ್ತಿದ್ದವು. ಈ ರೀತಿ ಅವುಗಳು ಎಂದಿಗೂ ಮಾಡುತ್ತಿರಲಿಲ್ಲ ಎಂದು ಫಾರ್ಮ್​ ಮಾಲೀಕ ಯಾನ್ನೀಸ್​ ಬೌರೌನಿಸ್​ ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್​ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿಯು ಇಂತದ್ದೇ ಒಂದು ಘಟನೆ ಸಂಭವಿಸಿತ್ತು. ಮಥುರಾ ಪೊಲೀಸ್​ ಠಾಣೆಯ ಗೋದಾಮಿನಲ್ಲಿ ಇರಿಸಲಾಗಿದ್ದ 500ಕೆಜಿಗೂ ಅಧಿಕ ಗಾಂಜಾಗಳನ್ನು ಇಲಿಗಳು ಸೇವಿಸಿದ್ದವು. ಬರೋಬ್ಬರಿ 60 ಲಕ್ಷ ರೂಪಾಯಿ ಮೌಲ್ಯದ ಡ್ರಗ್​ಗಳನ್ನು ಇಲಿಗಳು ನಾಶ ಮಾಡಿದ್ದವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read