ಹವಾಮಾನ ವೈಪರಿತ್ಯ: ಹೈದರಾಬಾದ್ ಗೆ ತೆರಳಿದ ವಿಮಾನ

ಶಿವಮೊಗ್ಗ: ಗೋವಾದಿಂದ ಶಿವಮೊಗ್ಗಕ್ಕೆ ಆಗಮಿಸಿದ ಸ್ಟಾರ್ ಏರ್ ವಿಮಾನ ಹವಾಮಾನ ವೈಪರಿತ್ಯದ ಕಾರಣ ಶಿವಮೊಗ್ಗದಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ಹೈದರಾಬಾದ್ ಗೆ ತೆರಳಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಗೋವಾದಿಂದ ಹೊರಟು ಮಧ್ಯಾಹ್ನ 1:30 ಕ್ಕೆ ಶಿವಮೊಗ್ಗಕ್ಕೆ ಆಗಮಿಸಿದ್ದ ವಿಮಾನಕ್ಕೆ ರನ್ ವೇ ಸ್ಪಷ್ಟವಾಗಿ ಕಾಣದೆ ಇದ್ದ ಕಾರಣ ಪ್ರಯಾಣಿಕರ ಹಿತದೃಷ್ಟಿಯಿಂದ ವಿಮಾನ ಹೈದರಾಬಾದ್ ಗೆ ತೆರಳಿದೆ. ಅಲ್ಲಿಂದ ಹೊರಟು ಸಂಜೆ 4:30ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ 5 ಗಂಟೆಗೆ ಹೈದರಾಬಾದ್ ಹೊರಟಿದೆ. ವಿಮಾನದಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅನಗತ್ಯವಾಗಿ 4 ಗಂಟೆ ಪ್ರಯಾಣ ಮಾಡಬೇಕಿದ್ದರಿಂದ ಜನರಿಗೆ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read