ಹಿಮಪಾತದಿಂದಾಗಿ ಹೆದ್ದಾರಿಯಿಂದ ಬಿದ್ದ ಕ್ಯಾಬ್: ಐವರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಗುರುವಾರ ಶ್ರೀನಗರದಿಂದ ಕಾರ್ಗಿಲ್‌ ಗೆ ಜನರನ್ನು ಕರೆದೊಯ್ಯುತ್ತಿದ್ದ ಕ್ಯಾಬ್ ಪರ್ವತ ಹೆದ್ದಾರಿಯಿಂದ ಬಿದ್ದು ಐವರು ಸಾವನ್ನಪ್ಪಿದ್ದಾರೆ.

ಇತ್ತೀಚಿನ ಹಿಮಪಾತದಿಂದ ಉಂಟಾದ ಜಾರು ರಸ್ತೆ ಪರಿಸ್ಥಿತಿಯಿಂದಾಗಿ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿನ ಪರ್ವತಮಯ ಝೋಜಿಲಾ ಪಾಸ್ ರಸ್ತೆಯಿಂದ ಪ್ರಯಾಣಿಕರ ಕ್ಯಾಬ್ ಸ್ಕಿಡ್ ಆಗಿ ಸೋನಾಮಾರ್ಗ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವಾಹನದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರು ಕಾರ್ಗಿಲ್ ಮೂಲದವರಾಗಿದ್ದು, ಅವರನ್ನು ಮೊಹಮ್ಮದ್ ಹುಸೇನ್, ಶಬೀರ್ ಹುಸೇನ್, ಮೊಹಮ್ಮದ್ ಅಕ್ಬರ್, ಮೊಹಮ್ಮದ್ ಅಮೀನ್ ಮತ್ತು ಅಬ್ದುಲ್ ಹಾದಿ ಎಂದು ಗುರುತಿಸಲಾಗಿದೆ.

ಮೂರು ದಿನಗಳಲ್ಲಿ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಜೊಜಿಲಾ ಪಾಸ್‌ನಲ್ಲಿ ಸಂಭವಿಸಿದ ಎರಡನೇ ದೊಡ್ಡ ಅಪಘಾತ ಇದಾಗಿದೆ. ಮಂಗಳವಾರ ನಡೆದ ಇದೇ ರೀತಿಯ ಅಪಘಾತದಲ್ಲಿ ಕೇರಳದ ನಾಲ್ವರು ಪ್ರವಾಸಿಗರು ಸೇರಿದಂತೆ ಐವರು ಸಾವನ್ನಪ್ಪಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read