BREAKING: ಹಳಿತಪ್ಪಿದ ಪ್ಯಾಸೆಂಜರ್ ರೈಲಿನ 5 ಬೋಗಿಗಳು, ತಪ್ಪಿದ ದುರಂತ

ತಮಿಳುನಾಡಿನ ವಿಲ್ಲುಪುರಂನಿಂದ ಪುದುಚೇರಿಗೆ ಹೋಗುವ ಪ್ಯಾಸೆಂಜರ್ ರೈಲಿನ ಐದು ಬೋಗಿಗಳು ವಿಲ್ಲುಪುರಂ ರೈಲು ನಿಲ್ದಾಣದ ಬಳಿ ಹಳಿತಪ್ಪಿವೆ.

ಮಂಗಳವಾರ ವಿಲ್ಲುಪುರಂ ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ. ವಿಲ್ಲುಪುರಂನಿಂದ ಪುದುಚೇರಿಗೆ ಹೋಗುವ ಪ್ಯಾಸೆಂಜರ್ ರೈಲಿನ ಕನಿಷ್ಠ ಐದು ಬೋಗಿಗಳು ಹಳಿತಪ್ಪಿದ್ದು, ದೊಡ್ಡ ಶಬ್ದ ಕೇಳಿದ ನಂತರ ರೈಲು ತಕ್ಷಣವೇ ನಿಂತಿದ್ದರಿಂದ ದೊಡ್ಡ ಅಪಘಾತ ತಪ್ಪಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಭಾರತೀಯ ರೈಲ್ವೆ ಪ್ರಕಾರ, ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ರೈಲ್ವೆ ಸಿಬ್ಬಂದಿ ಮತ್ತು ಎಂಜಿನಿಯರ್‌ಗಳು ಸ್ಥಳಕ್ಕೆ ಧಾವಿಸಿ ಹಳಿತಪ್ಪಿದ ರೈಲನ್ನು ಸರಿಪಡಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.

ರೈಲ್ವೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಇತರ ರೈಲುಗಳಿಗೆ ಮಾರ್ಗವನ್ನು ತೆರವುಗೊಳಿಸಲಾಯಿತು. ಘಟನೆಯು ತಾಂತ್ರಿಕ ದೋಷದಿಂದ ಉಂಟಾಗಿದೆಯೇ ಅಥವಾ ವಿಧ್ವಂಸಕ ಕೃತ್ಯದಿಂದ ಉಂಟಾಗಿದೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವಿಲ್ಲುಪುರಂ ರೈಲ್ವೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಎಂದು ರೈಲ್ವೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read