ಹುಬ್ಬಳ್ಳಿ : ಗಣೇಶ ವಿಸರ್ಜನೆ ವೇಳೆ ನೃತ್ಯ ಮಾಡುವಾಗ ಗಲಾಟೆ ನಡೆದಿದ್ದು, ಚಾಕು ಇರಿದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಾಪ ಅಲಿಯಾಸ್ ಚೇತನ ಗೌಡರ (32) ಎಂಬ ವ್ಯಕ್ತಿಗೆ ಚಾಕು ಇರಿಯಲಾಗಿದೆ. ಈತ ಶನಿವಾರ ಗಣಪತಿ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿದ್ದನು. ಈ ವೇಳೆ ತಳ್ಳಿದ್ದ ಕೆಲವರಿಗೆ ಪ್ರತಾಪ ಹೊಡೆದಿದ್ದನು. ಇದರಿಂದ ಕೋಪಗೊಂಡ ನಾಲ್ವರು ಪ್ರತಾಪನಿಗೆ 3 ಕಡೆ ಚಾಕು ಇರಿದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಈ ಸಂಬಂಧ ಪೊಲೀಸರು ಶಿವಕುಮಾರ, ರಾಕೇಶ, ಫಕೀರೇಶ ಹಾಗೂ ಅಪ್ರಾಪ್ತರು ಸೇರಿ ಐವರನ್ನು ಬಂಧಿಸಿದ್ದಾರೆ.
You Might Also Like
TAGGED:ಗಣಪತಿ ವಿಸರ್ಜನೆ