ಡಿಜಿಟಲ್ ಡೆಸ್ಕ್ : ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಸ್ತಕ ಸಾಲಿಗೆ ರಾಜ್ಯವಲಯ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
*ರಾಜ್ಯವಲಯ ಯೋಜನೆಗಳು
ಮೀನುಗಾರಿಕೆ ಸಲಕರಣೆ ಕಿಟ್ ವಿತರಣೆ ಯೋಜನೆಯಡಿ ಸಹಾಯಧನ ನೆರವು, ಮೀನುಮರಿ ಖರೀದಿಸಲು ನೆರವು ಯೋಜನೆ ಮತ್ತು ಕೆರೆ, ಜಲಾಶಯಗಳ ಅಂಚಿನ ಕೊಳೆಗಳಲ್ಲಿ ಮೀನುಮರಿ ಪಾಲನೆಗೆ ಸಹಾಯಧನ ನೆರವು ನೀಡಲಾಗುವುದು.
ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲ್ಲೂಕಿನ ಮೀನುಗಾರಿಕೆ ಇಲಾಖೆಯ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜೂ.21 ಕೊನೆಯ ದಿನವಾಗಿದೆ.ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ ಮತ್ತು ಕುರುಗೋಡು ತಾಲ್ಲೂಕು ವ್ಯಾಪ್ತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಭಾವನಾ-ಮೊ.7406508971 ಮತ್ತು ಸಂಡೂರು ಮೀನುಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ-ಮೊ.7204911897 ಇವರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You Might Also Like
TAGGED:ಮೀನುಗಾರಿಕೆ ಇಲಾಖೆ