ಬಡ್ಡಿ ರಹಿತವಾಗಿ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 3 ಲಕ್ಷ ರೂ.ವರೆಗೆ ಸಾಲ ಸೌಲಭ್ಯಕ್ಕಾಗಿ ಮೀನುಗಾರಿಕೆ ಇಲಾಖೆ ಅರ್ಜಿ

ಬಳ್ಳಾರಿ: ಮೀನುಗಾರಿಕೆ ಇಲಾಖೆಯು ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕ್ ಗಳಲ್ಲಿ ಬಡ್ಡಿರಹಿತವಾಗಿ 3 ಲಕ್ಷ ರೂ.ವರೆಗೆ ಸಾಲ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಫಲಾನುಭವಿಗಳು ಕಡ್ಡಾಯವಾಗಿ ಮಹಿಳಾ ಮೀನುಗಾರರಾಗಿರಬೇಕು. ಮೀನುಗಾರರ ಸಹಕಾರ ಸಂಘದ ಸದಸ್ಯರಾಗಿರಬೇಕು. ಸಾಲವನ್ನು ಮೀನುಗಾರಿಕೆ ಚಟುವಟಿಕೆಗಳಾದ ಬಲೆಗಳ ದುರಸ್ತಿ ಮತ್ತು ಬದಲಾವಣೆ, ಮೀನುಗಾರಿಕೆ ದೋಣಿಗಳ ದುರಸ್ತಿ, ಮೀನಿನ ಒಂದು ಬೆಳೆಗೆ ಕಾರ್ಯಾಚರಣೆ ವೆಚ್ಚ, ಸಿಹಿನೀರಿನ ಸೀಗಡಿಯ ಒಂದು ಬೆಳೆಗೆ ಕಾರ್ಯಚರಣೆ ವೆಚ್ಚ ದೋಣಿಗಳು, ಬಲೆಗಳು, ಗಾಳಿಯಂತ್ರ, ಗುತ್ತಿಗೆ ಮೊತ್ತ ಮತ್ತು ಮೀನುಗಾರಿಕೆ ಅಭಿವೃದ್ಧಿ ಇವುಗಳ ಮೇಲಿನ ಹೂಡಿಕೆ, ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಪಾಲನೆ, ಮೀನು ಮತ್ತು ಮೀನು ಉತ್ಪನಗಳ ಮಾರಾಟಕ್ಕೆ ಬಂಡವಾಳ ಇತ್ಯಾದಿಗಳಿಗೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮತ್ತು ಸಂಡೂರು ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ  ಭೇಟಿ ನೀಡಬಹುದು ಅಥವಾ ಮೊ.9449593156 ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read