ಕೊಲ್ಲಂ: ಮಾಟ-ಮಂತ್ರದ ವಿಚಾರವಾಗಿ ಪತಿ-ಪತ್ನಿ ನಡುವೆ ಗಲಾಟೆಯಾಗಿದ್ದು, ಪತಿ ಮಹಾಶಯ ಪತ್ನಿ ಮೇಲೆ ಬಿಸಿ ಬಿಸಿ ಫಿಶ್ ಕರಿ ಎರಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಕೇರಳದ ಕೊಲ್ಲಂ ನಲ್ಲಿ ಈ ಘಟನೆ ನಡೆದಿದೆ. ಚಡಯಮಂಗಲಂ ಸಮೀಪದ ವೈಕ್ಕಲ್ ನ ಸಂತ್ರಸ್ತೆ ರಜಿಲಾ ಗಪೂರ್ (36) ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ.
ಸಜಿಲ್ ಮಾಟ-ಮಂತ್ರ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಪತ್ನಿ ರಜಿಲಾಗೆ ಕೂದಲನ್ನು ಸಡಿಲ ಮಾಡಿಕೊಂಡು ತನ್ನ ಮುಂದೆ ಕುಳಿತುಕೊಂಡು ಭಸ್ಮ ಹಚ್ಚಿಕೊಳ್ಳುವಂತೆ ಹೇಳಿದ್ದಾನೆ. ಅಲ್ಲದೇ ತಾನು ಕೊಡುವ ಮಾಟ-ಮಂತ್ರದ ಲಾಕೆಟ್ ಹಾಕಿಕೊಟ್ಟುವಂತೆ ಒತ್ತಾಯಿಸಿದ್ದಾನೆ. ಪತ್ನಿ ನಿರಾಕರಿಸಿದ್ದಾಳೆ. ಅಡುಗೆ ಮನೆಯಲ್ಲಿ ಒಲೆ ಮೇಲೆ ಕುದಿಯುತ್ತಿದ್ದ ಫಿಶ್ ಕರಿಯನ್ನು ತಂದ ಪತಿ ಸಾಜಿಲ್, ಏಕಾಏಕಿ ಪತ್ನಿ ಮೇಲೆ ಎರಚಿದ್ದಾನೆ.
ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಬರುತ್ತಿದ್ದಂತೆ ಪತಿ ಎಸ್ಕೇಪ್ ಆಗಿದ್ದಾನೆ. ಗಂಭೀರವಾಗಿ ಸುಟ್ಟು ಗಾಯಗೊಂಡಿರುವ ರಜಿಲಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಫ್ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಪತಿಗಾಗಿ ಹುಡುಕಾಟ ನಡೆಸಿದ್ದಾರೆ.

 
			 
		 
		 
		 
		 Loading ...
 Loading ... 
		 
		 
		