ಮರದ ಮೇಲೆ ಪ್ಯಾರಾಚೂಟ್‌ ಸಮೇತ ಸಿಲುಕಿದ್ದವನನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ವಾಷಿಂಗ್ಟನ್‌ನ ಮರವೊಂದರ ಮೇಲೆ ಪ್ಯಾರಾಚೂಟ್‌ನೊಂದಿಗೆ ಸಿಕ್ಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಪಾರು ಮಾಡಲು ಅಲ್ಲಿನ ತುರ್ತು ವೈದ್ಯಕೀಯ ಸೇವಾ ಇಲಾಖೆ ಸಿಬ್ಬಂದಿ ಆಗಮಿಸಬೇಕಾಯಿತು.

ಏಪ್ರಿಲ್ 1ರಂದು ಜರುಗಿದ ಈ ಘಟನೆಯಲ್ಲಿ ಈ ಅನಾಮಧೇಯ ಪ್ಯಾರಾಚೂಟಿಸ್ಟ್‌‌ ಗ್ರಹಚಾರ ನೆಟ್ಟಗಿದ್ದ ಕಾರಣ ಮರಗಳ ಪಕ್ಕದಲ್ಲೇ ಹಾದು ಹೋಗುತ್ತಿದ್ದ ಭಾರೀ ಸಾಮರ್ಥ್ಯದ ವಿದ್ಯುತ್‌ ತಂತಿಗಳ ಮೇಲೆ ಬಿದ್ದಿಲ್ಲ. ಹಾಗೇನಾದರೂ ಆಗಿದ್ದರೆ ಆತ ಅಲ್ಲೇ ಸುಟ್ಟು ಬೂದಿಯಾಗಲಿದ್ದ.

ಜೌಗು ಪ್ರದೇಶವೊಂದರ ಮೇಲಿದ್ದ ಮರಗಳ ಮೇಲೆ ಈತ ಇದ್ದ ಕಾರಣ ತುರ್ತು ಸಿಬ್ಬಂದಿಗೆ ಏಣಿಗಳನ್ನು ಬಳಸಲು ಸಾಧ್ಯವಾಗಿಲ್ಲ. ಹೀಗಾಗಿ ವಿಶೇಷ ಏಣಿಯೊಂದನ್ನು ಬಳಸಿ ಪ್ಯಾರಾಚೂಟಿಸ್ಟ್‌ ನನ್ನು ಮರದಿಂದ ಕೆಳಗಿಳಿಸಲಾಗಿದೆ ಎಂದು ಇಲಾಖೆ ತನ್ನ ಫೇಸ್ಬುಕ್ ವಾಲ್‌ನಲ್ಲಿ ಘಟನೆಯ ಚಿತ್ರಗಳೊಂದಿಗೆ ಪೋಸ್ಟ್‌ನಲ್ಲಿ ತಿಳಿಸಿದೆ.

Firefighters rescue parachutist

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read