ಬೆಂಗಳೂರು : ಬೆಂಗಳೂರಲ್ಲಿ ಪಟಾಕಿ ಅವಘಡ ಕೇಸ್ ಹೆಚ್ಚುತ್ತಿದ್ದು, ಇದುವರೆಗೆ 40 ಮಂದಿಗೆ ಗಾಯಗಳಾಗಿದೆ . ಪಟಾಕಿ ಸಿಡಿತದಿಂದ ಗಾಯಗೊಂಡವರು ಮಿಂಟೋ, ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟಾಕಿ ಸಿಡಿಸುವವರಿಗಿಂತ ನೋಡುತ್ತಾ ನಿಂತವರು ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮನೆಯೊಂದರಲ್ಲಿ ಪಟಾಕಿ ಹಚ್ಚುವಾಗ ಕಣ್ಣಿಗೆ ಕಿಡಿಗಳು ಸಿಡಿದು 3 ವರ್ಷದ ಬಾಲಕನ ಕಣ್ಣಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ನಾರಾಯಣ ನೇತ್ರಾಲಯದಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ 12 ವರ್ಷದ ಬಾಲಕಿಯ ಕಣ್ಣಿಗೆ ಸಿಡಿದಿದೆ. ಪರಿಣಾಮ ಬಾಲಕಿಯ ಕಾರ್ನಿಯಾ ಭಾಗಕ್ಕೆ ಲಘಂ ಪ್ರಮಾಣದ ಹಾನಿಯಾಗಿದೆ. ಪಟಾಕಿಯ ಕಣಗಳನ್ನು ಹೊರ ತೆಗೆಯಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ನಾರಾಯಣ ಆಸ್ಪತ್ರೆ ತಿಳಿಸಿದೆ.