BREAKING NEWS: ಚೀನಾದಲ್ಲಿ ಭೀಕರ ಅಗ್ನಿ ದುರಂತ: 39 ಮಂದಿ ಸಜೀವ ದಹನ

ಬೀಜಿಂಗ್: ಚೀನಾದ ಜಿಯಾಂಗ್‌ ಕ್ಸಿ ಪ್ರಾಂತ್ಯದಲ್ಲಿ ಅಗ್ನಿ ದುರಂತದಲ್ಲಿ ಕನಿಷ್ಠ 39 ಮಂದಿ ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ

ಚೀನಾದ ಆಗ್ನೇಯ ಪ್ರಾಂತ್ಯದ ಜಿಯಾಂಗ್ ಕ್ಸಿಯಲ್ಲಿ ಬುಧವಾರ  ಬೆಂಕಿ ಕಾಣಿಸಿಕೊಂಡು 39 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ. ಪ್ರಾಂತ್ಯದ ಯುಶುಯಿ ಜಿಲ್ಲೆಯ ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ ಶಾಪಿಂಗ್ ಪ್ರದೇಶದ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಜನವರಿ 24 ರಂದು ಮಧ್ಯಾಹ್ನ 3:24 ಕ್ಕೆ ಜಿಯಾಂಗ್ ಕ್ಸಿಯ ಕ್ಸಿನ್ಯುನಲ್ಲಿನ ಅಂಗಡಿಯಲ್ಲಿ ನೆಲದ ಕೆಳಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಂಜೆ 6:40 ರ ಹೊತ್ತಿಗೆ ಅಪಘಾತದಲ್ಲಿ 25 ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಧಿಕಾರಿಗಳ ಪ್ರಕಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಬೆಂಕಿಯ ಕಾರಣದ ಬಗ್ಗೆ ತನಿಖೆ ಮಾಡಲಾಗುತ್ತಿದೆ. 25 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದರೂ, ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆಯ ಬಗ್ಗೆ ಸ್ಥಳೀಯ ಸರ್ಕಾರ ಇನ್ನೂ ಅಂದಾಜು ಮಾಡಿಲ್ಲ. ಸುಮಾರು 39 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read