ಬೆಂಕಿ ಅವಘಡ ಸಂಭವಿಸಿದಾಗ ಪಾರಾಗುವುದು ಹೇಗೆ? ಭಾರಿ ಮೆಚ್ಚುಗೆಗೆ ಪಾತ್ರವಾಯ್ತು ಶಿಕ್ಷಕಿಯೊಬ್ಬರು ಮಕ್ಕಳಿಗೆ ಹೇಳಿಕೊಟ್ಟ ಪಾಠ

ಬೆಂಕಿ ಆಕಸ್ಮಿಕದಂತಹ ಅವಘಡ ಸಂಭವಿಸಿದಾಗ ಹೇಗೆ ಅಪಾಯದಿಂದ ಪಾರಾಗಬೇಕು ಎಂಬುದನ್ನು ಪ್ರಾಯೋಗಿಕವಾಗಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಹೇಳಿಕೊಟ್ಟ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಗ್ನಿ ಅವಘಡದಂತಹ ಸಂದರ್ಭದಲ್ಲಿ ಮಕ್ಕಳು ಹೇಗೆ ಸಂಕಷ್ಟದ ಸ್ಥಿತಿಯಿಂದ ಧೈರ್ಯವಾಗಿ ಪಾರಾಗಬೇಕು ಎಂಬುದನ್ನ ಈ ವಿಡಿಯೋದಲ್ಲಿ ಮನದಟ್ಟಾಗುವಂತೆ ಚಿತ್ರಿತವಾಗಿದೆ.

ಏಕಾಏಕಿ ಬೆಂಕಿ ಬಿದ್ದು, ಸೈರನ್ ಕೂಗಲಾರಂಭಿಸುತ್ತದೆ. ತಕ್ಷಣ ಪುಟಾಣಿ ಮಕ್ಕಳು ಕರವಸ್ತ್ರದಲ್ಲಿ ಮುಗು ಮುಚ್ಚಿಕೊಂಡು ಒಬ್ಬೊಬ್ಬರಾಗಿ ಘಟನಾ ಸ್ಥಳದಿಂದ ಹುಷಾರಾಗಿ ಪಾರಾಗುತ್ತಾರೆ.

ತುಂಬಾ ಕ್ಯೂಟ್ ಆಗಿರುವ ಮಕ್ಕಳ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಇಂದಿನ ಮಕ್ಕಳಿಗೆ ಇಂತಹ ಉಪಯೋಗಕಾರಿ ಮಾಹಿತಿಗಳನ್ನು ಶಾಲೆಯಲ್ಲಿ ಶಿಕ್ಷಕರು ತಿಳಿಸಿಕೊಡುವುದರಿಂದ ಮುಂದೊಂದು ದಿನ ಅಪಾಯದ ಸಂದರ್ಭದಲ್ಲಿ ಸಹಾಯವಾಗಬಹುದಲ್ಲವೇ?

 

 

 

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read