ಧರ್ಮಗಳ ನಡುವೆ ದ್ವೇಷ ಹಬ್ಬಿಸುವ ಭಾಷಣ ಆರೋಪ ಉಪನ್ಯಾಸಕನ ವಿರುದ್ಧ ಎಫ್ಐಆರ್

ಮಂಗಳೂರು: ಧರ್ಮಗಳ ನಡುವೆ ದ್ವೇಷ ಸೃಷ್ಟಿಸುವ ಮಾತುಗಳನ್ನಾಡಿದ ಆರೋಪದ ಮೇಲೆ ಉಪನ್ಯಾಸಕನ ವಿರುದ್ಧ ಸಿಇಎನ್ ಅಪರಾಧ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ತೊಕ್ಕೊಟ್ಟು ಭಟ್ನಗರದ ನಿವಾಸಿ ಖಾಸಗಿ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಉಳ್ಳಾಲದ ಕಿನ್ಯಬೆಳರಿಂಗೆಯಲ್ಲಿ ಆಯೋಜಿಸಿದ್ದ ನವ ದಂಪತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ದ್ವೇಷ ಭಾಷಣ ಮಾಡಿದ ಆರೋಪ ಕೇಳಿ ಬಂದಿದೆ.

ನಾವು ಮದುವೆ ಸಮಾರಂಭವನ್ನು ಹಿಂದೂ ಸಮುದಾಯದವರ ಸಭಾಂಗಣದಲ್ಲಿಯೇ ಏರ್ಪಡಿಸಬೇಕು. ನಾವು ಖರೀದಿಸುವ ವಸ್ತುಗಳ ಒಂದಷ್ಟು ಮೊತ್ತ ವಿದೇಶಕ್ಕೆ ಹೋಗುತ್ತದೆ. ಅದು ಯಾರಿಗೂ ಸಲ್ಲುತ್ತದೆ ಎಂದು ಅರುಣ್ ಹೇಳಿದ ವಿಡಿಯೋ ಜಾಲತಾಣದಲ್ಲಿ ಹರಿದಾಡಿದೆ. ಸೆನ್ ಅಪರಾಧ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read