BIG NEWS : ‘ಯುವ ನಟ’ನನ್ನು ಮದುವೆಯಾಗುವುದಾಗಿ ನಂಬಿಸಿ ಹಣಕಾಸು ವಂಚನೆ : ಕನ್ನಡದ ಸಹ ನಟಿ ಅರೆಸ್ಟ್

ಮದುವೆಯಾಗುವುದಾಗಿ ನಂಬಿಸಿ ಯುವ ಸಹನಟನಿಗೆ ಲಕ್ಷಾಂತರ ರೂ.ವಂಚನೆ ಎಸಗಿದ ಆರೋಪದ ಮೇರೆಗೆ ಬೆಂಗಳೂರಿನ ಸಿನಿಮಾ ಹಾಗೂ ಕಿರುತೆರೆ ನಟಿಯನ್ನು ಶಿವಮೊಗ್ಗದ ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.

ಕೆಲವು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದ ನಟಿ ಉಷಾ ರವಿಶಂಕರ್ ಎಂಬ ನಟಿ ಶಿವಮೊಗ್ಗದ ಯುವ ಸಹನಟನಿಗೆ ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಫೇಸ್ ಬುಕ್ ಮೂಲಕ ಶಿವಮೊಗ್ಗದ ವಿನೋಬನಗರದ ಶರವಣನ್ ಪರಿಚಯ ಮಾಡಿಕೊಂಡ ನಟಿ ಉಷಾ ಸ್ನೇಹ ಬೆಳೆಸಿದ್ದಾರೆ. ನಂತರ ಇಬ್ಬರು ಕೂಡ ಪರಸ್ಪರ ವಾಟ್ಸಾಪ್ ನಂಬರ್ ಬದಲಾಯಿಸಿಕೊಂಡು ಮದುವೆಯಾಗುವುದಾಗಿ ನಿರ್ಧರಿಸುತ್ತಾರೆ. ನಂತರ ನಟನಿಂದ ಸುಮಾರು 8 ಲಕ್ಷ ಹಣ ಪಡೆದುಕೊಂಡ ನಟಿ ಆತನ ಕ್ರೆಡಿಟ್ ಕಾರ್ಡ್ ಗಳ ಮೂಲಕವೂ ಹಣ ಪಡೆದುಕೊಂಡು ಮೋಸ ಮಾಡಿದ್ದಾಳೆ ಎಂದು ಶರವಣನ್ ಆರೋಪಿಸಿದ್ದಾರೆ. ಸದ್ಯ ನ್ಯಾಯಾಲಯದ ಆದೇಶದಂತೆ ನಟಿಯನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read