ಹಾಸನ: ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಪೋಷಕರೊಬ್ಬರ ಸಾವಿನಲ್ಲಿ ಅಂತ್ಯವಾಗಿದೆ.
ತೌಫಿಕ್(28) ಮೃತಪಟ್ಟ ವ್ಯಕ್ತಿ. ಅರಸೀಕೆರೆಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ತೌಫಿಕ್ ಪುತ್ರ ಮತ್ತು ಫರಾನ್ ಎಂಬುವರ ಪುತ್ರ ಆಗಸ್ಟ್ 25ರಂದು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವಿಚಾರ ಇಬ್ಬರು ವಿದ್ಯಾರ್ಥಿಗಳ ಕುಟುಂಬಗಳ ನಡುವೆ ಅಸಮಾಧಾನಕ್ಕೆ ಕಾರಣವಾಗಿತ್ತು.
ನಾಲ್ಕು ದಿನದ ಹಿಂದೆ ಲಸ್ಸಿ ಶಾಪ್ ನಲ್ಲಿ ತೌಫಿಕ್ ಮತ್ತು ಫರಾನ್ ಅವರು ಮುಖಾಮುಖಿ ಆದಾಗ ಮಕ್ಕಳ ಗಲಾಟೆ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ಅತಿರೇಕಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ತೌಫಿಕ್ ಅವರನ್ನು ಫರಾನ್ ತಳ್ಳಿದ್ದು, ಅವರು ಮೆಟ್ಟಿಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅವರ ಸಾವಿನಿಂದ ರೊಚ್ಚಿಗೆದ್ದ ಕುಟುಂಬದವರು ಫರಾನ್ ಮನೆ ಮೇಳೆ ದಾಳಿ ನಡೆಸಿದ್ದು, ಮನೆಯನ್ನು ಜಖಂಗೊಳಿಸಿ ಕಾರ್ ಗೆ ಬೆಂಕಿ ಹಚ್ಚಿದ್ದಾರೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.