ಸಣ್ಣ ರೋಗದಿಂದ ದೊಡ್ಡ ಖಾಯಿಲೆಗೂ ಅಂಜೂರ ಮದ್ದು

ಬಾದಾಮಿ, ಪಿಸ್ತಾದಂತೆ ಅಂಜೂರವನ್ನು ಇಷ್ಟಪಟ್ಟು ತಿನ್ನುವವರ ಸಂಖ್ಯೆ ಬಹಳ ಕಡಿಮೆ. ಆದ್ರೆ ಅಂಜೂರದಲ್ಲೂ ಅಪಾರ ಶಕ್ತಿಯಿದೆ. ನಿಯಮಿತವಾಗಿ ಅಂಜೂರ ಸೇವನೆ ಮಾಡುವುದ್ರಿಂದ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಸಿಗುತ್ತದೆ.

ಅಂಜೂರ ಸೇವನೆಯಿಂದಾಗುವ ಲಾಭ :

  • ಅಂಜೂರ ನಮ್ಮ ದೇಹಕ್ಕೆ ಶಕ್ತಿ ನೀಡುವ ಕೆಲಸವನ್ನು ಮಾಡುತ್ತದೆ. ನಮ್ಮ ಸುಸ್ತು, ಆಯಾಸವನ್ನು ಕಡಿಮೆ ಮಾಡುತ್ತದೆ.
  • ನೀವು ಹಾಲಿನಲ್ಲಿ ಅಂಜೂರವನ್ನು ನೆನೆಹಾಕಿ ಸೇವನೆ ಮಾಡಿದ್ರೆ ನರ ದೌರ್ಬಲ್ಯ ಸಮಸ್ಯೆ ಕಡಿಮೆಯಾಗುತ್ತದೆ.
  • ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನೂ ಅಂಜೂರ ಮಾಡುತ್ತದೆ. ಹಾಲಿನೊಂದಿಗೆ ಅಂಜೂರವನ್ನು ನೆನೆಹಾಕಿ ಅಥವಾ ಹಾಲಿನ ಜೊತೆ ಸೇವನೆ ಮಾಡುವುದು ಹೆಚ್ಚು ಪ್ರಯೋಜನಕಾರಿ.
  • ರಕ್ತದೊತ್ತಡ ಸಮಸ್ಯೆಯುನ್ನು ನಿಯಂತ್ರಿಸಲು ನೀವು ಡಯಟ್‌ ನಲ್ಲಿ ಅಂಜೂರ ಸೇರಿಸಿ.
  • ಮಾನಸಿಕ ಸಮಸ್ಯೆ, ಉದ್ವೇಗ ನಿಯಂತ್ರಣಕ್ಕೂ ಅಂಜೂರ ಒಳ್ಳೆಯದು.
  • ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ದಿನಕ್ಕೊಂದಾದ್ರೂ ಅಂಜೂರವನ್ನು ಸೇವನೆ ಮಾಡಲು ಮರೆಯಬೇಡಿ.
  • ಅಂಜೂರದಲ್ಲಿ ಕೊಬ್ಬಿರದ ಕಾರಣ ನಿಮಗೆ ತೂಕ ಏರಿಕೆ ಚಿಂತೆಯಿಲ್ಲ. ತೂಕ ನಿಯಂತ್ರಣಕ್ಕೆ ನೀವು ಅಂಜೂರವನ್ನು ಸೇವನೆ ಮಾಡಬಹುದು.

ದಿನದಲ್ಲಿ ಎಷ್ಟು ಅಂಜೂರ ಸೇವನೆ ಮಾಡಬೇಕು? :

ದಿನದಲ್ಲಿ ನೀವು 2 ರಿಂದ 3 ಅಂಜೂರದ ಹಣ್ಣುಗಳನ್ನು ಸೇವನೆ ಮಾಡಬೇಕು. ಅದನ್ನು ಹಾಗೆ ತಿನ್ನುವುದಕ್ಕಿಂತ ತುಂಡುಗಳಾಗಿ ಕತ್ತರಿಸಿ ಪ್ರತಿದಿನ ರಾತ್ರಿ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಆ ನೀರನ್ನು ಕುದಿಸಿ ನೀರನ್ನು ಅರ್ಧಕ್ಕೆ ಇಳಿಸಿ ಕುಡಿಯಿರಿ. ಉಳಿದ ಅಂಜೂರದ ಹಣ್ಣುಗಳನ್ನು ಜಗಿದು ತಿನ್ನಿರಿ. ನೀವು ಹಾಲಿನಲ್ಲಿ ನೆನೆಹಾಕಿ ಅಂಜೂರ ಸೇವನೆ ಮಾಡೋದ್ರಿಂದಲೂ ಲಾಭವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read